×
Ad

ದಸಂಸ ರಾಜ್ಯ ಸಂಚಾಲಕರಾಗಿ ಲಕ್ಷ್ಮಿ ನಾರಾಯಣ ನಾಗವಾರ ಪುನರ್ ಆಯ್ಕೆ

Update: 2022-04-17 00:17 IST

ಬೆಂಗಳೂರು, ಎ. 16: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾಗಿ ಲಕ್ಷ್ಮಿ ನಾರಾಯಣ ನಾಗವಾರ ಅವರು ಇತ್ತೀಚೆಗೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಪುನರ್ ಆಯ್ಕೆಯಾಗಿದ್ದಾರೆ.

ರಾಜ್ಯ ಸಂಘಟನಾ ಸಂಚಾಲಕರಾಗಿ ಜೀವನಹಳ್ಳಿ ಆರ್.ವೆಂಕಟೇಶ್(ಬೆಂಗಳೂರು), ಶ್ಯಾಂರಾವ್ ಘಾಟಿಗೆ(ಬಾಗಲಕೋಟೆ), ಶರಣಪ್ಪ ಲೇಬಗಿರಿ(ಕೊಪ್ಪಳ), ಕೆಂಪಣ್ಣ ಸಾಗ್ಯ(ಮಂಡ್ಯ), ಎಫ್.ವೈ.ದೊಡ್ಡಮನಿ (ಗದಗ), ಖಜಾಂಚಿಯಾಗಿ ಶಿವಜ್ಞಾನಿ ಕಪ್ಪಗಲ್(ರಾಯಚೂರು), ರಾಜ್ಯ ಸಮಿತಿ ಸದಸ್ಯರಾಗಿ ತರೀಕೆರೆ ನಾಗರಾಜ್(ಚಿಕ್ಕಮಗಳೂರು), ಜಯನ್ ಮಲ್ಪೆ(ಉಡುಪಿ), ಪ್ರಭು ಮೇಗಳಮನಿ(ರಾಯಚೂರು) ಅವರನ್ನು ಆಯ್ಕೆ ಮಾಡಲಾಗಿದೆ.

ವಿಭಾಗೀಯ ಸಂಚಾಲಕರಾಗಿ ಕಲಬುರಗಿ-ಯಾದಗಿರಿ ಚಂದ್ರು ಚಕ್ರವರ್ತಿ, ಮೈಸೂರು- ರಾಜಶೇಖರ್ ಕೋಟಿ, ಬೆಂಗಳೂರು-ಮಂಜುನಾಥ್ ನವಿಲೆ, ಬೆಳಗಾವಿ ವಿಭಾಗೀಯ ಸಂಚಾಲಕರಾಗಿ ರಾವುತ್ ಎಸ್. ತಳಗೇರಿ, ಮಹಾದೇವ ಹಾದಿಮನಿ ಸಹಿತ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ರಾಜ್ಯ ಸಂಚಾಲಕ ಜೀವನಹಳ್ಳಿ ಆರ್.ವೆಂಕಟೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News