×
Ad

ರಾಜ್ಯದಲ್ಲಿ ಪಿಡಿಒಗಳಿಂದಲೂ ವಿವಾಹ ನೋಂದಣಿ

Update: 2022-04-17 08:16 IST
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಇನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪಂಚಾಯತ್ ಮಟ್ಟದಲ್ಲಿ ವಿವಾಹ ನೋಂದಣಿ ಮಾಡಬಹುದಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.

ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ವಿವಾಹ ನೋಂದಣಾಧಿಕಾರಿಯಾಗಿ ನೇಮಿಸಲು ಶನಿವಾರದ ಅಧಿಸೂಚನೆ ಅವಕಾಶ ಮಾಡಿಕೊಡುತ್ತದೆ. ಇದರೊಂದಿಗೆ ಗ್ರಾಮಪಂಚಾ‌ಯತ್ ಗಳು ಜನನ ಮತ್ತು ಮರಣ ನೋಂದಣಿಯ ಜತೆಗೆ ವಿವಾಹ ನೋಂದಣಿಯನ್ನೂ ಮಾಡಬಹುದಾಗಿದೆ. 2022-23ನೇ ಬಜೆಟ್‍ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಭರವಸೆ ನೀಡಿದ್ದರು.‌

ಈ ಮೊದಲು ಪಿಡಿಒಗಳಿಗೆ ಜನನ ಮತ್ತು ಮರಣವನ್ನು ನೋಂದಣಿ ಮಾಡಲು ಅವಕಾಶ ನೀಡಲಾಗಿತ್ತು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್) ಎಲ್.ಕೆ.ಅತೀಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News