ಬೆಂಗಳೂರು: ಎ.26ಕ್ಕೆ ಮದ್ಯದಂಗಡಿ ಮಾಲಕರ ಪ್ರತಿಭಟನೆ
Update: 2022-04-17 23:47 IST
ಬೆಂಗಳೂರು, ಎ.17: ಮದ್ಯ ಖರೀದಿಗೆ ಹಿಂದೆ ಇದ್ದ ಹಳೆಯ ಪದ್ಧತಿಯನ್ನು ರದ್ದುಪಡಿಸಿ ಹೊಸದಾಗಿ ಇ-ಇಂಡೆಂಟಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಅಬಕಾರಿ ಇಲಾಖೆ ಕ್ರಮ ವಿರೋಧಿಸಿ ಫೆಡರೇಷನ್ ಆಫ್ ವೈನ್ ಮಚರ್ಂಟ್ಸ್ ಅಸೋಸಿಯೇಷನ್, ಮಂಗಳವಾರ(ಎ.26) ಬೆಳಗ್ಗೆ 10.30ಕ್ಕೆ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದೆ.
ಸಂಘಟನೆಯ ಜಿಲ್ಲಾ ಸಂಘದ ಪದಾಧಿಕಾರಿಗಳು ಕರ್ನಾಟಕ ರಾಜ್ಯ ಪಾನೀಯ ನಿಗಮದ(ಕೆಎಸ್ ಬಿಸಿಎಲ್) ಡಿಪೋಗಳ ಎದುರು ಎ.6ರಂದು ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆಯನ್ನು ಬಗೆಹರಿಸಲು ಇಲಾಖೆ ವಿಫಲವಾಗಿದೆ. ಹೀಗಾಗಿ, ಸರಕಾರದ ಮೇಲೆ ಮತ್ತೆ ಒತ್ತಡ ಹೇರಲು ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಸ್.ಗುರುಸ್ವಾಮಿ ಹೇಳಿದ್ದಾರೆ.