ಬೆಂಗಳೂರು | ಲ್ಯಾಂಡಿಂಗ್ ವೇಳೆ ಲಘು ವಿಮಾನ ಅಪಘಾತ: ಪೈಲಟ್ ಗಳಿಗೆ ಗಾಯ
Update: 2022-04-18 20:43 IST
ಬೆಂಗಳೂರು, ಎ.18: ತರಬೇತಿನಿರತ ಲಘು ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾದ ಘಟನೆ ನಗರದ ಜಕ್ಕೂರು ವಾಯುನೆಲೆಯಲ್ಲಿ ನಡೆದಿದೆ.
ಖಾಸಗಿ ಕಂಪೆನಿಗೆ ಸೇರಿದ ವಿಮಾನದಲ್ಲಿ ತರಬೇತಿ ನಡೆಯುತ್ತಿದ್ದಾಗ ವಿಮಾನ ಪಲ್ಟಿಯಾಗಿ ಪೈಲಟ್‍ಗಳಾದ ಕ್ಯಾಪ್ಟನ್ ಆಕಾಶ್ ಹಾಗೂ ಚೆರ್ಲಿಆ್ಯನ್ ಸ್ಟನ್ರ್ಸ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಲ್ಯಾಂಡಿಂಗ್ ಆಗಿ ಸ್ವಲ್ಪದೂರ ಸಾಗುತ್ತಿದ್ದಂತೆ ರನ್ ವೇನಲ್ಲಿ ನಾಯಿಗಳು ಕಾಣಿಸಿಕೊಂಡಿವೆ. ನಾಯಿಗಳಿಗೆ ಢಿಕ್ಕಿ ತಪ್ಪಿಸುವ ಯತ್ನದಲ್ಲಿ ವಿಮಾನ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.