ಅಸ್ಸಾಂ: ಇಬ್ಬರು ಉಕ್ರೇನ್ ಪ್ರಜೆಗಳು ಪೊಲೀಸ್ ವಶಕ್ಕೆ

Update: 2022-04-22 16:37 GMT

ಗುವಾಹತಿ, ಎ. 22: ಮೌಲ್ಯಯುತ ದಾಖಲೆಗಳಿಲ್ಲದ ಪ್ರಯಾಣಿಸುತ್ತಿದ್ದ ಇಬ್ಬರು ಉಕ್ರೇನ್‌ನ ಪ್ರಜೆಗಳನ್ನು ಸರಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯ ಬದಾರ್ಪುರದಿಂದ ಶುಕ್ರವಾರ ಬಂಧಿಸಿದೆ.

ಅಗರ್ತಲಾ-ಹೊಸದಿಲ್ಲಿ-ತ್ರಿಪುರಾ ಸುಂದರಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಕ್ರಿಸಿನ್‌ಸ್ಕಿ ವೊಲೊಡಿಮಿರ್ (39) ಹಾಗೂ ನಝರಿ ವೊಝ್ನಯುಕ್ (21) ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ‘‘ನಾವು ದಿಲ್ಲಿಗೆ ಪ್ರಯಾಣಿಸುತ್ತಿದ್ದೆವು’’ ಎಂದು ಇಬ್ಬರು ಪೊಲೀಸರಿಗೆ ತಿಳಿಸಿರುವುದಾಗಿ ಕರೀಮ್‌ಗಂಜ್‌ನ ಪೊಲೀಸ್ ಅಧೀಕ್ಷಕ ಪದ್ಮನಾಭ ಬರುವಾ ತಿಳಿಸಿದ್ದಾರೆ.

‘‘ನಾವು ನಮ್ಮ ಪ್ರಯಾಣ ದಾಖಲೆಗಳನ್ನು ಕಳೆದುಕೊಂಡಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ. ಆದುದರಿಂದ ನಾವು ದಾಖಲೆಗಳನ್ನು ಪರಿಶೀಲಿಸಲು ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದೇವೆ. ಅಲ್ಲಿವರೆಗೆ ಅವರು ನಮ್ಮ ವಶದಲ್ಲಿ ಇರಲಿದ್ದಾರೆ ಎಂದು ಬರುವಾ ತಿಳಿಸಿದ್ದಾರೆ. ಇವರಿಬ್ಬರು ಪ್ರಯಾಣ ದಾಖಲೆಗಳಿಲ್ಲದೆ ಭಾರತ ಪ್ರವೇಶಿಸಿದ್ದರೆ, ಪೊಲೀಸರು ಕಾನೂನು ಕ್ರಮಗಳನ್ನು ಅನುಸರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ದೇಶ ರಶ್ಯದೊಂದಿಗೆ ಯುದ್ಧ ಆರಂಭಿಸುವುದಕ್ಕಿಂತ ಮುನ್ನ ನಾವು ಉಕ್ರೇನ್‌ನಿಂದ ನಿರ್ಗಮಿಸಿದ್ದೆವು ಎಂದು ಅವರು ಹೇಳಿದ್ದಾರೆ. ಅವರು ತ್ರಿಪುರಕ್ಕೆ ಹೇಗೆ ಪ್ರವೇಶಿಸಿದರು ಹಾಗೂ ಎಲ್ಲಿದ್ದರು ಎಂಬ ಬಗ್ಗೆ ನಮಗೆ ತಿಳಿದಿಲ್ಲ. ಅವರು ಈ ಎರಡೂ ವಿಚಾರದ ಬಗ್ಗೆ ತಿಳಿಸಿಲ್ಲ. ಅವರ ಹೇಳಿಕೆಯಲ್ಲಿ ವಿರೋಧಾಭಾಸ ಇದೆ’’ ಎಂದು ಅವರು ತಿಳಿಸಿದ್ದಾರೆ. ಉಕ್ರೇನ್ ರಾಯಭಾರಿ ಕಚೇರಿಯಿಂದ ಶುಕ್ರವಾರದ ಒಳಗೆ ದಾಖಲೆಗಳನ್ನು ಸ್ವೀಕರಿಸದೇ ಇದ್ದರೆ, ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ಇಬ್ಬರು ವಿದೇಶಿಗರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ‘‘ನಾವು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದೇವೆ ಹಾಗೂ ಕಸ್ಟಡಿಗೆ ಕೋರಲಿದ್ದೇವೆ’’ ಎಂದು ಬರುವಾ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News