ಮಣಿಪಾಲ: ಅನ್ನಭಾಗ್ಯ ಹಸಿವು ಮುಕ್ತ ಕಾರ್ಯಕ್ರಮಕ್ಕೆ ಚಾಲನೆ

Update: 2022-04-22 16:53 GMT

ಮಣಿಪಾಲ : ಸ್ವಾತಂತ್ರ್ಯದ ಅಮೃತ್ ಮಹೋತ್ಸವದಂಗವಾಗಿ ಉಡುಪಿ ಜಿಲ್ಲಾ  ಆಹಾರ ನಾಗರಿಕ ಸರಬರಾಜು ಇಲಾಖೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಂತೆ ಮಣಿಪಾಲ ನ್ಯಾಯಬೆಲೆ ಅಂಗಡಿಯಲ್ಲಿ ರಾಜ್ಯ ಸರಕಾರದ ಅನ್ನ-ಭಾಗ್ಯ ಹಸಿವು ಮುಕ್ತ ಕಾರ್ಯಕ್ರಮಕ್ಕೆ ನಗರಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ ಶುಕ್ರವಾರ ಚಾಲನೆ ನೀಡಿದರು.

ಬಳಿಕ ಅವರು ಫಲಾನುಭವಿಗಳ ಜೊತೆ ಸಮಾಲೋಚನೆ ನಡೆಸಿದರು. ತಾಲೂಕು ಆಹಾರ ಶಿರಸ್ತೇದಾರರಾದ ಪಾರ್ವತಿ, ಮಾಜಿ ನಗರಸಭಾ ಸದಸ್ಯೆ ಸ್ನೇಹಪ್ರಭಾ ಕಮಲಾಕ್ಷ, ಮಣಿಪಾಲ ಗ್ರಾಹಕರ ವಿವಿದ್ದುದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಕಮಲಾಕ್ಷ ಕೆ, ನಿರ್ದೇಶಕರಾದ ಪ್ರಭಾಕರ ಪೈ, ಮಾಲತಿ ರಾವ್, ಬಿ ಜಿ ಎಸ್ ಪ್ರಭು, ಅಲೋಶಿಯಸ್ ಡಿ ಅಲ್ಮೇಡಾ, ಕೆ ಆರ್. ಸತ್ಯನಾರಾಯಣ, ಸ್ಥಳೀಯ ಪ್ರಮುಖರಾದ ದಯಾನಂದ್ ನಾಯಕ್, ಸುಬ್ರಮಣ್ಯ ಪೈ, ಹರೀಶ್ ಜಿ ಕಲ್ಮಾಡಿ ಮತ್ತಿತರರು ಹಾಜರಿದ್ದರು.

ಕಾರ್ಯದರ್ಶಿ ಶೈಲಜಾ ಕಾರ್ಯಕ್ರಮ ಸಂಯೋಜಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News