×
Ad

ಅಡ್ಯಾರ್: ಮರಳು ಅಕ್ರಮ ಸಾಗಾಟ ಆರೋಪ; ಸೊತ್ತು ವಶ

Update: 2022-04-22 22:26 IST

ಮಂಗಳೂರು : ನಗರ ಹೊರವಲಯದ ಅಡ್ಯಾರ್ ಎಂಬಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಸಿದ್ದತೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ನೇತೃತ್ವದ ಪೊಲೀಸ್ ತಂಡ ಗುರುವಾರ ರಾತ್ರಿ ದಾಳಿ ನಡೆಸಿ ಮರಳನ್ನು ವಶಪಡಿಸಿಕೊಂಡಿದ್ದಾರೆ.

ಅಡ್ಯಾರ್ ಪದವಿನಲ್ಲಿ ಗಸ್ತು ಕರ್ತವ್ಯದಲ್ಲಿರುವಾಗ ಆರೋಪಿಗಳಾದ ಫರಂಗಿಪೇಟೆಯ ಶಬೀರ್ ಹಾಗೂ ಶಿಹಾಬುದ್ದೀನ್ ಎಂಬವರು ಅಡ್ಯಾರ್ ಗ್ರಾಮದ ಕಾಂಬ್ಳಿ ಧಕ್ಕೆಯ ಸಮೀಪ ಅಕ್ರಮವಾಗಿ ಮರಳನ್ನು ಸಾಗಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭಿಸಿತು. ಅದರಂತೆ ದಾಳಿ ನಡೆಸಿದಾಗ ಸುಮಾರು 18ಸಾವಿರ ರೂ. ಮೌಲ್ಯದ 3 ಲೋಡಿನಷ್ಟು ಮರಳು ಕಂಡು ಬಂದಿದ್ದು, ಅದನ್ನು ಸ್ವಾಧೀನಪಡಿಸಿಕೊಂಡರಲ್ಲದೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News