ಅಕ್ಷರ ಸಾಹಿತ್ಯ ದೃಶ್ಯ ಮಾಧ್ಯಮದಂತಾಗದಿರಲಿ: ಚಂದ್ರಶೇಖರ ಕಂಬಾರ

Update: 2022-04-23 18:22 GMT

ಬೆಂಗಳೂರು, ಎ.23: ಅಕ್ಷರ ಸಾಹಿತ್ಯವು ದೃಶ್ಯ ಮಾಧ್ಯಮ ರೂಪವನ್ನು ಪಡೆಯುತ್ತಿರುವ ಅಪಾಯ ದಿನಗಳು ನಮ್ಮೆಲ್ಲರನ್ನು ಕಾಡುತ್ತಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರು ಬೇಸರ ವ್ಯಕ್ತಪಡಿಸಿದರು.

ಶನಿವಾರ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಪ್ರಕಾಶಕರ ಸಂಘದ ಸಹಯೋಗದೊಂದಿಗೆ ಚಾಮರಾಜಪೇಟೆಯ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಿಟಿಷರು ಸರ್ವರಿಗೂ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದ್ದರಿಂದ ಭಾರತಕ್ಕೆ ದೊಡ್ಡ ಉಪಕಾರವನ್ನು ಮಾಡಿದರು. 1898ರ ವೇಳೆಗೆ ಪುಸ್ತಕವು ಹೊರಬಂದಿತು. ಪುಸ್ತಕ ಸಂಸ್ಕøತಿ ಇಂದು ಹೆಮ್ಮರವಾಗಿ ಬೆಳೆದುನಿಂತಿದೆ. ಒಂದು ದೊಡ್ಡ ಕ್ರಾಂತಿಯನ್ನು ಹುಟ್ಟುಹಾಕಿದೆ. ಆದರೆ ಸಾಹಿತ್ಯ ದೃಶ್ಯ ಮಾಧ್ಯಮದಂತಾಗದಿರಲಿ ಎಂದು ಅವರು ಹೇಳಿದರು.

ಮನು ಬಳಿಗಾರ್ ಅವರು ಮಾತನಾಡಿ, ಪುಸ್ತಕ ಸಂಸ್ಕೃತಿ ಎಷ್ಟೇ ಬೆಳೆದರೂ, ಪುಸ್ತಕೋದ್ಯಮ ಹಾಗೂ ರಾಯಧನದ ಬಗ್ಗೆ ಬಹಳ ಕಾಲದಿಂದಲೂ ಚರ್ಚೆ ನಡೆಯುತ್ತಲೇ ಇದೆ. ಜಿಎಸ್‍ಟಿ ಏರಿಕೆ ಸೇರಿ ಅನೇಕ ಸಮಸ್ಯೆಗಳ ಬಗ್ಗೆ ಪ್ರಕಾಶಕರ ಸಂಘ ದನಿ ಎತ್ತುತ್ತಲೇ ಇದೆ. ಇದರಿಂದಲೂ ಲಾಭ ಗಳಿಸುವ ಸರಕಾರಗಳ ಧೋರಣೆ ಇರುತ್ತದೆ ಎಂದು ಎಂದರು.

ಕಾರ್ಯಕ್ರಮದಲ್ಲಿ ಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಯನ್ನು ಪ್ರಕಾಶ್ ಗಿರಿಮಲ್ಲಣ್ಣನವರ್ ಅವರಿಗೆ ಮತ್ತು ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿಯನ್ನು ವಸಂತ ಪ್ರಕಾಶನದ ವಸಂತ ಶ್ರೀನಿವಾಸನ್ ಅವರಿಗೆ ನೀಡಿ ಗೌರವಿಸಲಾಯಿತು. ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ, ಅಭಿನವ ಪ್ರಕಾಶನದ ನ. ರವಿಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News