ಬೆಂಗಳೂರು | 10 ಶ್ವಾನಗಳಿಗೆ ವಿಷವಿಟ್ಟು ಕೊಲೆ; ದೂರು
Update: 2022-04-24 19:49 IST
ಬೆಂಗಳೂರು, ಎ. 24: ಹತ್ತು ಶ್ವಾನಗಳಿಗೆ ವಿಷವಿಟ್ಟು ಸಾಯಿಸಿದ ಅಮಾನವೀಯ ಘಟನೆ ಪರಪ್ಪನ ಅಗ್ರಹಾರ ಬಳಿಯ ರಾಯಸಂದ್ರದಲ್ಲಿ ವರದಿಯಾಗಿದೆ.
ರಾತ್ರಿ ಹೊತ್ತು ನಾಯಿಗಳು ಬೊಗಳುತ್ತವೆ ಎಂದು ಅಪಾರ್ಟ್‍ಮೆಂಟ್ ಬಳಿ ಇದ್ದ ಶ್ವಾನಗಳಿಗೆ ದುಷ್ಕರ್ಮಿಗಳು ವಿಷವುಣಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲ ಶ್ವಾನಗಳು ಅಸ್ವಸ್ಥಗೊಂಡಿದ್ದು, ಪ್ರಾಣಿಪ್ರಿಯ ಸಂಘದ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಸಂಬಂಧ ಸಾಮಾಜಿಕ ಹೋರಾಟಗಾರ ಅರುಣ್ ಎಂಬುವರು ದೂರು ನೀಡಿದ್ದು, ಪ್ರಾಣಿಗಳಿಗೆ ವಿಷ ಹಾಕಿ ಕೊಲ್ಲುವುದು ವನ್ಯಜೀವಿ ಸಂರಕ್ಷಣೆ ಕಾಯ್ದೆ 1972 ಅಡಿಯಲ್ಲಿ ಪ್ರಕರಣ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.