ಬಡಾನಿಡಿಯೂರು ಕೇಶವ ರಾವ್
Update: 2022-04-27 19:58 IST
ಉಡುಪಿ : ಮೂಲತಃ ಉಡುಪಿಯವರಾದ ಬಡಾನಿಡಿಯೂರು ಕೇಶವ ರಾವ್ (೮೭) ಬುಧವಾರ ಬೆಳಗಾವಿಯಲ್ಲಿ ನಿಧನ ಹೊಂದಿದರು.
ಧಾರ್ಮಿಕ ಮನೋಭಾವದ ವ್ಯಕ್ತಿಯಾಗಿದ್ದ ಇವರು ಬೆಳಗಾವಿಯ ಮಾಧ್ವ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದರು. ಉಡುಪಿಯ ಅಷ್ಠ ಮಠಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮೃತರು ಮೂವರು ಗಂಡು ಮಕ್ಕಳನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.