ಎ.30ರಿಂದ ಚಿತ್ರಾಪುರದಲ್ಲಿ ʼಶ್ರಮಿಕರ ಸಂಭ್ರಮದ ಕ್ರೀಡಾ ಕೂಟʼ
Update: 2022-04-28 15:12 IST
ಮಂಗಳೂರು : ರಾಜ್ಯ ಇಂಟಕ್, ಪಣಂಬೂರು ಮೊಗವೀರ ಮಹಾಸಭಾ ಚಿತ್ರಾಪುರ, ಕುಳಾಯಿ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮತ್ತು ಸಂಘಟನೆಗಳ ಸಹಕಾರದೊಂದಿಗೆ ಎ. 30 ಹಾಗೂ ಮೇ 1ರಂದು ಚಿತ್ರಾಪುರ ಮೊಗವೀರ ಮಹಾ ಸಭಾದ ಮೈದಾನದಲ್ಲಿ ಶ್ರಮಿಕರ ಸಂಭ್ರಮದ ಕ್ರೀಡಾ ಕೂಟ ನಡೆಯಲಿದೆ ಎಂದು ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
"ಏಪ್ರಿಲ್ 30 ಮತ್ತು ಮೇ 1ರಂದು ಕಾರ್ಮಿಕರಿಗಾಗಿ ಶ್ರಮಿಕರ ಸಂಭ್ರಮದ ಕಾರ್ಯಕ್ರಮದಲ್ಲಿ ಕಡಲ ತೀರದ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ಥಳೀಯರು ಮಾತ್ರವಲ್ಲದೆ ಇಡೀ ಜಿಲ್ಲೆಯ ಜನರು, ಹೊರಜಿಲ್ಲೆಯ ಆಸಕ್ತರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು" ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಪುರುಷೋತ್ತಮ ಪೂಜಾರಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ ಉಪಸ್ಥಿತರಿದ್ದರು.