ಬಿ.ಸಿ.ರೋಡ್ - ತಲಪಾಡಿಯಲ್ಲಿ ಪ್ರತಿದಿನ ಉಚಿತ ಇಫ್ತಾರ್ ಕೂಟ

Update: 2022-04-28 17:14 GMT

ಬಿ.ಸಿ.ರೋಡ್ : ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ ಹಾಗೂ ಎ.ಆರ್. ಫೌಂಡೇಶನ್  ಸಂಸ್ಥೆ ಇದರ ವತಿಯಿಂದ ತಲಪಾಡಿ ಬೈಕಂಡಿ ಪರಿಸರದಲ್ಲಿ ಒಂದು ತಿಂಗಳು ಪ್ರತಿದಿನ ಉಚಿತ ಇಫ್ತಾರ್ ವ್ಯವಸ್ಥೆ ಕಲ್ಪಿಸಲಾಗಿದೆ.

ಮಂಗಳೂರಿನಿಂದ ಬಿ.ಸಿ ರೋಡ್ ಮತ್ತು ಬಿ.ಸಿ.ರೋಡ್ ನಿಂದ ಮಂಗಳೂರು ಕಡೆಗೆ ಪ್ರಯಾಣಿಸುವ  ಯಾತ್ರಿಕರಿಗೆ ತಲಪಾಡಿಯ ಬೈಕಂಡಿ ಪ್ರದೇಶದಲ್ಲಿ  ಪವಿತ್ರ ರಮಝಾನ್ ಉಪವಾಸ ತೊರೆಯಲು ತಂಪು ಪಾನೀಯ. ಹಣ್ಣು ಹಂಪಲು ವಿವಿಧ ಬಗೆಯ ಆಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಸಾವಿರಾರು ಮಂದಿ ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ  ಇಕ್ಬಾಲ್ ತಿಳಿಸಿದ್ದಾರೆ.‌

ಸಂಸ್ಥೆಯ ಜಿಲ್ಲಾ ಗೌರವಾಧ್ಯಕ್ಷ ಎಸ್.ಎಂ.ಮುಸ್ತಫಾ,  ಎ.ಆರ್. ಫೌಂಡೇಶನ್ ನ ಸಂಸ್ಥಾಪಕ ಸಯ್ಯಿದಾ ರಹ್ಮಾನ್ ಶೈಖ್ ಕುಶಾಲನಗರ ಹಾಗೂ ತಲಪಾಡಿಯ ಕೆ.ಎಫ್.ಸಿ ಸಂಸ್ಥೆಯ ಎಲ್ಲಾ ಸದಸ್ಯರುಗಳ ಸಹಕಾರ, ಪರಿಶ್ರಮದಿಂದ  ಇಂತಹ ಉತ್ತಮ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News