×
Ad

ಸಹ್ಯಾದ್ರಿ ಕಾಲೇಜಿನಲ್ಲಿ ಉಚಿತ ಪವರ್ ಲೂಮ್ ನೇಯ್ಗೆ ತರಬೇತಿ

Update: 2022-04-30 20:23 IST

ಮಂಗಳೂರು : ನಗರದ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ವ್ಯವಹಾರ ಆಡಳಿತ ವಿಭಾಗವು ಕೇಂದ್ರ ಸರಕಾರದ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನೆ ವಿಭಾಗದ ಮಹಿಳಾ ಸಬಲೀಕರಣ ಯೋಜನೆಯಡಿ ದ.ಕ. ಮತ್ತು ಉಡುಪಿ ಜಿಲ್ಲೆಯ ಮಹಿಳೆಯರಿಗೆ ಪವರ್ ಲೂಮ್ ನೇಯ್ಗೆ ತರಬೇತಿ ನೀಡುತ್ತಿದೆ.

ಪ್ರತೀ ತಂಡದಲ್ಲಿ ೧೦ ರಿಂದ ೧೫ ಮಹಿಳೆಯರಿಗೆ ಪವರ್ ಲೂಮ್‌ನಲ್ಲಿ ಬಟ್ಟೆ ನೇಯ್ಗೆಯ ತರಬೇತಿಯನ್ನು ಮೇ ೯ರಿಂದ ನೀಡಲಾಗುವುದು. ತರಬೇತಿ ಪಡೆದ ಅಭ್ಯರ್ತಿಗಳು ಸರಕಾರದಿಂದ ಲಭ್ಯವಿರುವ ಸವಲತ್ತುಗಳಿಗೆ ಅರ್ಹರಾಗಿರುತ್ತಾರೆ.

ಆಸಕ್ತರು (೧೮-೪೫ ವಯಸ್ಸಿನ) ಈ ತರಬೇತಿಗೆ ಅರ್ಜಿಯನ್ನು ಆಧಾರದ ಪ್ರತಿಯೊಂದಿಗೆ ಎಂಬಿಎ ವಿಭಾಗ, ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್, ಅಡ್ಯಾರ್-ಮಂಗಳೂರು  ೫೭೫೦೦೭ಕ್ಕೆ ಸಲ್ಲಿಸಬಹುದು.  ಹೆಚ್ಚಿನ ಮಾಹಿತಿಗೆ ಮೊ.ಸಂ: ೯೮೪೫೦೮೯೧೬೫ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News