ರಾಜೀವ್ ಗಾಂಧಿ ವಿವಿ ಘಟಿಕೋತ್ಸವ; ವೈದ್ಯಕೀಯದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಡಾ.ಸೆಕೀಬಾ ಅಲಿಗೆ ಚಿನ್ನದ ಪದಕ
Update: 2022-05-01 12:50 IST
ಬೆಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ 24ನೇ ಘಟಿಕೋತ್ಸವ ಕಾರ್ಯಕ್ರಮ ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ನಲ್ಲಿ ನಡೆಯಿತು.
ಕರ್ನಾಟಕದ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ದಂತ ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಯಲ್ಲಿ ಕರ್ನಾಟಕದಲ್ಲೇ ಪ್ರಥಮ ರ‍್ಯಾಂಕ್ ಗಳಿಸಿದ ಡಾ.ಸೆಕೀಬಾ ಅಲಿ ಕಾಡೂರು ಅವರಿಗೆ ರಾಜ್ಯಪಾಲರು ಚಿನ್ನದ ಪದಕ ವಿತರಿಸಿದರು.
ರಾಜ್ಯದಲ್ಲಿ ಮೊದಲ ರ‍್ಯಾಂಕ್ ಗಳಿಸಿದ ಡಾ.ಸೆಕೀಬಾ ಅಲಿ ಕಾಡೂರು, ಕಾಸರಗೋಡು ಜಿಲ್ಲೆಯ ಪೈವಳಿಕೆಯ ಕಾಡೂರು ನಿವಾಸಿ.