ಕಾರ್ಮಿಕ ದಿನದ ರ‌್ಯಾಲಿ ನಿಷೇಧಿಸಿ ನ್ಯಾಯಾಲಯದ ಆದೇಶ ದುರದೃಷ್ಟಕರ: ಎ.ಪಿ.ರಂಗನಾಥ
ಬೆಂಗಳೂರು : ಎಲ್ಲಾ ಕಾರ್ಮಿಕ ಸಂಘಟನೆಗಳ ಕಾರ್ಮಿಕ ಬಂಧುಗಳು ತಮ್ಮ ಕೇಂದ್ರ ಕಚೇರಿಗಳಿಂದ, ಮೆರವಣಿಗೆಯಲ್ಲಿ ಆಗಮಿಸಿ ಟೌನ್ ಹಾಲ್ ನಲ್ಲಿ ಸಮಾವೇಶಗೊಳ್ಳುವ ಸಂಪ್ರದಾಯವು ಈ ಬಾರಿ ನಮ್ಮ ಘನ ಉಚ್ಚ ನ್ಯಾಯಾಲಯದ ಆದೇಶದಿಂದ ನಿಂತಿರುವುದು ದುರದೃಷ್ಟಕರ ಎಂದು ವಕೀಲರ ಸಂಘ ಬೆಂಗಳೂರು ಇದರ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ ತಿಳಿಸಿದ್ದಾರೆ.
ಸಾವಿರಾರು ಕಾರ್ಮಿಕರ ತ್ಯಾಗ ಬಲಿದಾನಗಳಿಂದ ಗಳಿಸಿದ ಹಕ್ಕು ಮತ್ತು ಸೌಲಭ್ಯಗಳನ್ನು ಸ್ಮರಿಸುವ ಯುವ ಪೀಳಿಗೆಯನ್ನು ಹೋರಾಟಕ್ಕೆ ಪ್ರೇರೇಪಿಸುವ ಮೆರವಣಿಗೆ ಮತ್ತು ಸಭೆಗಳಿಗೆ ಅವಕಾಶ ನಿರಾಕರಣೆಯ ಮೂಲಕ ನಾಗರಿಕ ಸಮಾಜ ಶ್ರಮಿಕರ ದುಡಿಮೆಯನ್ನು ಅಗೌರಿವಿಸಿದೆ ಎಂದು ನನ್ನ ಭಾವನೆ.
ಮಾನ್ಯ ಉಚ್ಚ ನ್ಯಾಯಾಲಯದ ಈ ಪರಿಯ ಆದೇಶದಿಂದ, ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಗೋಪಾಲ ಗೌಡರು ನೊಂದು ಪತ್ರ ಬರೆದಿರುವುದು ಉಲ್ಲೆಖಾರ್ಹ. ಬಂಡವಾಳ ಶಾಹಿ, ಕಾರ್ಯಾಂಗ ಮತ್ತು ಶಾಸಕಾಂಗಕ್ಕೆ ಅಪವಿತ್ರ ಮೈತ್ರಿಯ ದೆಸೆಯಿಂದ ಕಾರ್ಮಿಕರ ಹಕ್ಕುಗಳನ್ನು ದಮನಿಸಲಾಗುತ್ತಿರುವ ದುರಿತ ಕಾಲದಲ್ಲಿ ಕಾರ್ಮಿಕ ಬಂಧುಗಳೊಂದಿಗೆ ವಕೀಲ ವೃಂದ ಸದಾ ಜೊತೆಯಲ್ಲಿರುವುದು. ಸರ್ವರಿಗೂ ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು ಎಂದು ಎ.ಪಿ.ರಂಗನಾಥ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.