ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಆರೋಪಿ ಮೊಬೈಲ್, ಬೈಕ್ ಪತ್ತೆ
Update: 2022-05-02 20:53 IST
ಬೆಂಗಳೂರು, ಮೇ 2: ಸುಂಕದಕಟ್ಟೆ ವ್ಯಾಪ್ತಿಯಲ್ಲಿ ಯುವತಿಯ ಮೇಲೆ ಆ್ಯಸಿಡ್ ದಾಳಿ ಪ್ರಕರಣ ಸಂಬಂಧ ಆರೋಪಿ ನಾಗೇಶ್ ಬಾಬು ಬಳಸಿದ್ದ ಮೊಬೈಲ್ ಹಾಗೂ ಬೈಕ್ ಪತ್ತೆಯಾಗಿದೆ.
ನಗರದ ಮೆಜೆಸ್ಟಿಕ್ ವ್ಯಾಪ್ತಿಯಲ್ಲಿ ಬೈಕ್ ಪತ್ತೆಯಾಗಿದ್ದರೆ, ಹೊಸಕೋಟೆ ಬಳಿ ಮೊಬೈಲ್ ಸಿಕ್ಕಿದೆ. ಆದರೆ ನಾಗೇಶ್ ಇನ್ನೂ ಪತ್ತೆಯಾಗಬೇಕಿದ್ದು, ಆತನ ಪತ್ತೆಗಾಗಿ 10 ಪೊಲೀಸರ ತಂಡಗಳು ಹುಡುಕಾಟ ನಡೆಸುತ್ತಿವೆ.
ನಾಗೇಶ್ ಮೊಬೈಲ್ ಅನ್ನು ಹೊಸಕೋಟೆಯಲ್ಲಿ ಪತ್ತೆ ಮಾಡಲಾಗಿದ್ದು, ಆತ ಬೆಂಗಳೂರು ಬಿಡುವ ಮುನ್ನ ಹೊಸಕೋಟೆ ಟೋಲ್ ಬಳಿ ಮೊಬೈಲ್ ಬಿಸಾಕಿದ್ದ. ಮೊಬೈಲ್ ಸ್ವಿಚ್ ಆಫ್ ಆದ ರೀತಿಯಲ್ಲಿ ದಾರಿ ಹೋಕರೊಬ್ಬರಿಗೆ ಮೊಬೈಲ್ ಸಿಕ್ಕಿದೆ. ಅವರು ಆನ್ ಮಾಡಿದ್ದು, ಆ ವ್ಯಕ್ತಿಯನ್ನು ಪತ್ತೆಮಾಡಿ ವಿಚಾರಿಸಿದಾಗ ಮೊಬೈಲ್ ಬಿಸಾಕಿ ಹೋಗಿರುವುದು ಬೆಳಕಿಗೆ ಬಂದಿದೆ.
ತಿರುಪತಿ, ತಮಿಳುನಾಡಿನ ದೇವಸ್ಥಾನಗಳಲ್ಲಿಯೂ ಆರೋಪಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.