ಸಿದ್ದಕಟ್ಟೆ ಎಲಿಯ ರಹ್ಮಾನಿಯ ಜುಮಾ ಮಸೀದಿ ಅದ್ಯಕ್ಷರಾಗಿ ಮುಹಮ್ಮದ್ ಝೂಬಿ ಪುನರಾಯ್ಕೆ
Update: 2022-05-04 14:21 IST
ಸಿದ್ದಕಟ್ಟೆ: ಇತಿಹಾಸ ಪ್ರಸಿದ್ಧ ಎಲಿಯ ಜುಮಾ ಮಸೀದಿ ಅದ್ಯಕ್ಷರಾಗಿ ಯುವ ಉದ್ಯಮಿ, ಬಂಟ್ವಾಳ ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ಅಧ್ಯಕ್ಷರಾದ ಮುಹಮ್ಮದ್ ಝೂಬಿ ಪುನರಾಯ್ಕೆಗೊಂಡಿದ್ದಾರೆ.
ಮೇ.2ರ ಮಂಗಳವಾರದಂದು ಈದ್ ದಿನ ಮಸೀದಿ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ 2022-2025 ನೇ ಸಾಲಿನ ಆಡಳಿತ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಮುನೀರ್ ಬೆಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ಎಕೆ, ಕಾರ್ಯದರ್ಶಿಯಾಗಿ ಎಂಎಚ್ ನವಾಝ್, ಖಜಾಂಚಿಯಾಗಿ ಮುಹಮ್ಮದ್ ಇರ್ಶಾದ್ ಮೂಡಬಿದಿರೆ ಮತ್ತು ಗೌರವಧ್ಯಕ್ಷರಾಗಿ ಅಬ್ದುಲ್ ರಹ್ಮಾನ್(ಅದ್ದುಕಾಕ) ಮೂಡಬಿದಿರೆ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಖತೀಬ್ ಮುಹಮ್ಮದ್ ಮದನಿ ಉಸ್ತಾದ್, ಎಂಎಚ್ ಅಬೂಬಕ್ಕರ್, ಕುದುರ್ ಅಹ್ಮದ್, ಹಮೀದ್, ಹಕೀಂ, ಹುಸೈನಬ್ಬ, ಕರೀಂ, ಇಮ್ರಾನ್ ಪಾಟೀಲ್, ಇಮ್ರಾನ್ ಮೂಡಬಿದಿರೆ, ಆದಂ ಮೂಡಬಿದಿರೆ, ಕುಂನ್ಞಿಮೋನಾಕ, ಇಸ್ಮಾಯಿಲ್ ಮತ್ತು ರಫೀಕ್ ಉಪಸ್ಥಿತರಿದ್ದರು.