ಮಂಗಳೂರು: ಬಿಸಿಯೂಟ ನೌಕರರಿಂದ ಪ್ರತಿಭಟನೆ
Update: 2022-05-04 17:28 IST
ಮಂಗಳೂರು : ವಯಸ್ಸಿನ ನೆಪವೊಡ್ಡಿ ಕಡ್ಡಾಯವಾಗಿ ನಿವೃತ್ತಿಗೊಳಿಸಲ್ಪಟ್ಟ ಬಿಸಿಯೂಟ ನೌಕರರಿಗೆ ಸೌಲಭ್ಯ ಅಥವಾ ಒಂದು ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕರ್ನಾಟ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ರಿ)ದ (ಸಿಐಟಿಯು) ದ.ಕ.ಜಿಲ್ಲಾ ಸಮಿತಿ ಗೌರವಾಧ್ಯಕ್ಷೆ ಪದ್ಮಾವತಿ ಶೆಟ್ಟಿ ಒತ್ತಾಯಿಸಿದರು.
ಮಂಗಳೂರು ದಕ್ಷಿಣ ಮತ್ತು ಉತ್ತರ ಶಾಸಕರಾದ ವೇದವ್ಯಾಸ ಕಾಮತ್-ಡಾ.ವೈ ಭರತ್ ಶೆಟ್ಟಿಯವರ ಮಂಗಳೂರು ಮನಪಾ ಕಟ್ಟಡದಲ್ಲಿರುವ ಕಚೇರಿಯ ಮುಂದೆ ಬುಧವಾರ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿಐಟಿಯು ಅಖಿಲ ಭಾರತ ವರ್ಕಿಂಗ್ ಕಮಿಟಿ ಸದಸ್ಯ ವಸಂತ ಆಚಾರಿ ಮಾತನಾಡಿ ಕಳೆದ ೧೯ ವರುಷಗಳಿಂದ ಪ್ರಾಮಾಣಿಕವಾಗಿ ಜನಸೇವೆಗೈದ ಕಾರ್ಮಿಕರಿಗೆ ಗೌರಯುತವಾಗಿ ಬಿಡುಗಡೆ ಮಾಡಬೇಕಾದ ರಾಜ್ಯ ಸರಕಾರ ಅನ್ಯಾಯ ಎಸಗಿದೆ ಎಂದು ಆಪಾದಿಸಿದರು. ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷೆ ಭವ್ಯಾ, ಮುಂದಾಳು ಗಳಾದ ಜಯಶ್ರಿ, ಶಾಲಿನಿ, ಲಲಿತಾ, ಅರುಣಾ ವಹಿಸಿದ್ದರು.