ಮೇ 12ಕ್ಕೆ ಉದ್ಯಮಿಯಾಗು, ಉದ್ಯೋಗ ನೀಡು ಕಾರ್ಯಾಗಾರ
ಉಡುಪಿ : ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳ ಉದ್ದಿಮೆಗಳ ಅಭಿವೃದ್ಧಿಗಾಗಿ ‘ಉದ್ಯಮಿಯಾಗು ಹಾಗೂ ಉದ್ಯೋಗ ನೀಡು’ ಕಾರ್ಯಾಗಾರ ವನ್ನು ಮೇ ೧೨ರಂದು ಮಂಗಳೂರು ಕೊಡಿಯಾಲ್‌ಬೈಲ್‌ನ ಡಾ.ಟಿ.ಎಮ್.ಎ. ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3.30ರವರೆಗೆ ಮಣಿಪಾಲದ ರಜತಾದ್ರಿ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ವರ್ಚುವಲ್ ವೇದಿಕೆ ಮೂಲಕ ಕಾರ್ಯಕ್ರಮ ನಡೆಯಲಿದ್ದು ಕಾರ್ಯಾಗಾರದಲ್ಲಿ ಕೈಗಾರಿಕೆ ಸ್ಥಾಪನೆ ಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಯೋಜನೆ, ಮೂಲ ಸೌಕರ್ಯ, ಹಣಕಾಸು ಸೌಲಭ್ಯ ಹಾಗೂ ಯಶಸ್ವಿ ಯುವ ಉದ್ದಿಮೆ ದಾರರಿಂದ ಅವರ ಯಶೋಗಾಥೆ ಬಗ್ಗೆ ಮಾಹಿತಿ ನೀಡಲಾಗುವುದು.
ಉದ್ದಿಮೆ ದಾರರು ವೆಬ್‌ಸೈಟ್ -https://ebiz.karnataka.gov.in/eBiz/Public/Entrepreneur Registration- ಮೂಲಕ ನೋಂದಣಿ ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: ೦೮೨೦-೨೫೭೫೬೫೦, ಉಪನಿರ್ದೇಶಕ ಸೀತಾರಾಮ ಶೆಟ್ಟಿ, ಮೊಬೈಲ್ ಸಂಖ್ಯೆ: ೯೪೪೮೬೨೩೯೫೨ ಹಾಗೂ ಸಹಾಯಕ ನಿರ್ದೇಶಕ ಜಿ. ವಾಮನ ನಾಯ್ಕ್ ಮೊಬೈಲ್ ಸಂಖ್ಯೆ: ೯೪೪೮೪೦೯೪೮೮ ಅನ್ನು ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.