×
Ad

​ಪ್ಯಾಶನ್ ಡಿಸೈನಿನತ್ತ ಆಧುನಿಕ ಜಗತ್ತು ಮಾರು ಹೋಗಿದೆ: ದಯಾನಂದ ಮಾಸ್ಟರ್

Update: 2022-05-05 22:54 IST

ಕಾರ್ಕಳ: ಇಂದಿನ ಆಧುನಿಕ ಜಗತ್ತಿನಲ್ಲಿ ಪ್ಯಾಶನ್ ಡಿಸೈನಿಂಗ್ ಮತ್ತೊಂದು ಮಜಲನ್ನು ಪಡೆದುಕೊಂಡಿದೆ. ಪ್ರತಿ ಯೊಬ್ಬರು ಪ್ಯಾಶನ್ ಡಿಸೈನ್ನತ್ತ ಮಾರು ಹೋಗಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವರ್ಗದವರೂ ಕೂಡ ಪ್ಯಾಶನ್ ಡಿಸೈನಿಂಗ್ ಕಲಿಯಬೇಕಾಗಿದೆ. ಇದರೊಂದಿಗೆ ಜನರಲ್ಲಿ ಸೌಂದರ್ಯ ಪ್ರಜ್ಞೆಯ ಜೊತೆಗೆ ಆದಾಯದ ಮಟ್ಟವು ಉತ್ತಮವಾಗಲಿದೆ. ಮಹಿಳೆಯರ ಸ್ವಾಭಿಮಾನಿ  ಬದುಕು ಅರ್ಥಪೂರ್ಣವಾಗಲಿದೆ ಎಂದು  ನಿವೃತ್ತ ಮುಖ್ಯೋಪಾಧ್ಯಾಯ ದಯಾನಂದ ಮಾಸ್ಟರ್ ನುಡಿದರು.

ಅವರು ಸುಮೇಧಾ ಪ್ಯಾಶನ್ ಇನ್ಸ್ಟಿಟ್ಯೂಟ್ ವತಿಯಿಂದ ಕಾರ್ಕಳ ಬಂಗ್ಲೆಗುಡ್ಡೆ ಸಧ್ಭಾವನ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಚಿತ ತರಬೇತಿ ಶಿಬಿರವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು  ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಪುರಸಭಾ ಸದಸ್ಯೆ ನೀತಾ ಆಚಾರ್ಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಧ್ಬಾವನನಗರದ ಹಿರಿಯ ಶಿಕ್ಷಕಿ ಸುಮಂಗಲ ಶುಭಾಸಂಶನೆಗೈದರು.

ಸುಮೇಧಾ ಪ್ಯಾಶನ್ ಇನ್ಸ್ಟಿಟ್ಯೂಟ್ ಮುಖ್ಯಸ್ಥೆ ಸಾಧನ ಜಿ ಆಶ್ರಿತ್ ಪ್ರಸ್ತಾವನೆಗೈದರು. ಸುಮೇಧಾ ಪ್ಯಾಶನ್ ಇನ್ಸ್ಟಿಟ್ಯೂಟ್ ನ ಜಯಂತಿ ಕಾರ್ಯಕ್ರಮ ನಿರೂಪಿಸಿದರು. ವಂದನಾರವರು ಪ್ರಾರ್ಥಿಸಿದರು. ಸುಪ್ರಿಯಾರವರು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News