ಕಣಚೂರು: ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟನೆ

Update: 2022-05-06 11:52 GMT

ಕೊಣಾಜೆ:  ಕೋವಿಡ್ ಎರಡನೇ ಅಲೆಯ ಪರಿಸ್ಥಿತಿ ತೀರಾ ಹದಗೆಟ್ಡು,  ಆಸ್ಪತ್ರೆಗಳಲ್ಲಿ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿತ್ತು.  ಜಿಲ್ಲಾ ಆಸ್ಪತ್ರೆಗಳಲ್ಲಿ   ವೆಂಟಿಲೇಟರ್ ಗಳಿದ್ದರೂ, ಸಿಬ್ಬಂದಿ ಕೊರತೆಯನ್ನು ನೀಗಿಸುವಲ್ಲಿ ಕಣಚೂರು ಸೇರಿದಂತೆ ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತದ  ಜೊತೆಗೆ ಸಹಕರಿಸುವುದು ಶ್ಲಾಘನೀಯ ಎಂದು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಹಿರಿಯ ತಜ್ಞ ಹಾಗೂ ಶ್ವಾಸಕೋಶಶಾಸ್ತ್ರಜ್ಞ ಸಲಹೆಗಾರ ಡಾ.ಶರತ್ ಬಾಬು ಎಸ್. ಅಭಿಪ್ರಾಯಪಟ್ಟರು

ನಾಟೆಕಲ್ ನ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ , ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ನ  ನರ್ಸಿಂಗ್ ಸೈನ್ಸ್ ನ  ವೈದ್ಯಕೀಯ, ಶಸ್ತ್ರಚಿಕಿತ್ಸಾ  ಶುಶ್ರೂಷೆ ವಿಭಾಗ ಆಸ್ಪತ್ರೆಯ ಮೂರನೇ ಮಹಡಿಯ ಸಭಾಂಗಣದಲ್ಲಿ ಆಯೋಜಿಸಿದ್ದ `ಉಸಿರಾಟದ ಆರೈಕೆ ಹಾಗೂ ವಾಯು ಮಾರ್ಗ ನಿರ್ವಹಣೆಯಲ್ಲಿ  ಕೌಶಲ್ಯಗಳ ಸುಧಾರಣೆ' ವಿಚಾರದ ಕುರಿತ  ಒಂದು ದಿನದ ರಾಜ್ಯಮಟ್ಟದ ಕಾರ‍್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಉಸಿರಾಟದ ಕಾಯಿಲೆಗಳ ಸಂದರ್ಭ ಆತ್ಮಸ್ಥೆರ್ಯದ ಬೆಂಬಲವನ್ನು ತುಂಬುವವರು ದಾದಿಯರು. ಹೆಚ್ಚಾಗಿ ಯಂತ್ರಗಳ ಬಳಕೆಯೇ ಮುಖ್ಯವಾಗಿರುವುದರಿಂದ ನಿರ್ವಹಿಸಬೇಕಾದವರು ಬುದ್ಧಿವಂತರಾಗಿರುತ್ತಾರೆ.   ಶ್ವಾಸಕೋಶ ಸಂಬಂಧಿ ಚಿಕಿತ್ಸೆ ನೀಡುವವರು  ಯಂತ್ರಗಳ ನವೀಕರಣದ ಜೊತೆಗೆ  ಜ್ಞಾನದ ನವೀಕರಣವೂ ಅಗತ್ಯ ಇರಬೇಕು.  ಮೂರು ವರ್ಷಗಳ ಅವಧಿಯಲ್ಲಿ  ನರ್ಸಿಂಗ್ ಸಿಬ್ಬಂದಿ ಮುಂಚೂಣಿ ಕೆಲಸಗಾರರು  ಹಾಗೂ ಭಾವನಾತ್ಮಕ ಹಾಗೂ ದೈಹಿಕ ಒತ್ತಡಗಳಿಗೆ ಒಳಗಾದವರು. ಕೋವಿಡ್ ರೋಗಿಗಳಿಗೆ ಟ್ರಾಮಾ ಕೇರ್ ಹೋಂ ಬಂಡಲ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿದೇಶಗಳಲ್ಲಿ ಮಾತ್ರವಿದ್ದ ವ್ಯವಸ್ಥೆ ಇದೀಗ ಭಾರತದಲ್ಲಿಯೂ ಆರಂಭವಾಗಿದೆ. ಉಸಿರಾಟದ ತೊಂದರೆಗೊಳಗಾದವರನ್ನು ಸೀಮಿತ ಸಮಯದಲ್ಲಿ  ಶೀಘ್ರ ಚಿಕಿತ್ಸೆ ಒದಗಿಸುವುದೇ ಪರಿಹಾರವಾಗಿದೆ. ಇವೆಲ್ಲವನ್ನು ಮುಂದಿಟ್ಟು ಆಗಿರುವ ಸಂಶೋಧನೆಗಳು ಹಾಗೂ ಹೊಸ ವಿಚಾರಗಳ ಪರಿಚಯದ ಸಲುವಾಗಿ ಹಮ್ಮಿಕೊಂಡಿರುವ ಕರ‍್ಯಗಾರವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕಣಚೂರು ಮೋನು ಮಾತನಾಡಿ,  ಸಮಾಜದ ಕಟ್ಟಕಡೆಯ ಜನರ ಆರೋಗ್ಯದ ಬಗ್ಗೆ ನಿಗಾ ಇಡುವ ಜವಾಬ್ದಾರಿ ಹೊತ್ತಿರುವವರು ಯುವಪೀಳಿಗೆ. ದೇಶ ಅತ್ಯುನ್ನತ ಸ್ಥಾನಕ್ಕೆ ಏರಲು ಅವರೇ ಕಾರಣರಾಗಿರುತ್ತಾರೆ. ದೇಶದಲ್ಲಿ ಪ್ರಜೆಗಳಿಗೆ ಸಾಲುವಷ್ಟು ವೈದ್ಯರು, ನಸ್೯ ನವರಿಲ್ಲ.  ಇವೆಲ್ಲವನ್ನು ಕಳೆದ ಮೂರು ವರ್ಷಗಳಲ್ಲಿ ಪ್ರಪಂಚದಾದ್ಯಂತ ಸಾಕಷ್ಟು ಅಧ್ಯಯನ ನಡೆದಿವೆ ಎಂದರು.

ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್,  ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಹರೀಶ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಜಿನ್ಸೀ ಜೋಸೆಫ್ ಉಪಸ್ಥಿತರಿದ್ದರು.

ಕಣಚೂರು ನರ್ಸಿಂಗ್ ಸೈನ್ಸ್ ಪ್ರಾಂಶುಪಾಲೆ ಮೋಲಿ ಸಲ್ದಾನ್ಹ ಸ್ವಾಗತಿಸಿದರು. ಆ್ಯನ್ ಭಾನ್ಸ್ ನಿರ್ವಹಿಸಿದರು. ಪ್ರಿಯಾ ಮೊಂತೇರೊ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News