×
Ad

ನಕಲಿ ದಾಖಲೆ ಸೃಷ್ಟಿಸಿ ಜಮೀನು ವಂಚನೆ ಪ್ರಕರಣ; ಮಂಗಳೂರು ಸೆನ್ ಪೊಲೀಸರಿಂದ ಮಹಿಳೆ ಸಹಿತ ಇಬ್ಬರ ಬಂಧನ

Update: 2022-05-06 20:33 IST

ಮಂಗಳೂರು : ನಕಲಿ ದಾಖಲೆಪತ್ರಗಳಲ್ಲದೆ ಸಹಿಯನ್ನೂ ನಕಲುಗೊಳಿಸಿ ವೃದ್ಧರೊಬ್ಬರಿಗೆ ಸೇರಿದ ಜಮೀನನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿರುವ ಮಂಗಳೂರು ನಗರ ಸೆನ್ ಪೊಲೀಸರು ಶುಕ್ರವಾರ ಮಹಿಳೆ ಸಹಿತ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮೂಲತಃ ಬೆಂಗಳೂರಿನ ಪ್ರಸ್ತುತ ಬಜ್ಪೆ ಸಮೀಪದ ಕೊಂಪದವಿನಲ್ಲಿ ವಾಸವಾಗಿರುವ ಕ್ರಿಸ್ಟಿನ್ ಎಡ್ವಿನ್ ಜೋಸೆಫ್ ಗೊನ್ಸಾಲ್ವಿಸ್ (84) ಎಂಬವರಿಗೆ ಸೇರಿದ ಜಮೀನನ್ನು ಖರೀದಿಸುವ ನೆಪದಲ್ಲಿ ಕಬಳಿಸಿದ ಆರೋಪರ ಮೇರೆಗೆ ಉಡುಪಿಯ ಅಶೋಕ್ ಕುಮಾರ್ ಮತ್ತು  ರೇಷ್ಮಾ ವಾಸುದೇವ ನಾಯಕ್‌ರನ್ನು ಮಂಗಳೂರು ಸೆನ್ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ರಾಮ ಪೂಜಾರಿಯ ಬಂಧನ ಇನ್ನಷ್ಟೆ ಆಗಬೇಕಿದೆ. ಮೂವರ ವಿರುದ್ಧ ನಕಲಿ ದಾಖಲೆ ಮತ್ತು ನಕಲಿ ಸಹಿ ಮಾಡಿ ವಂಚಿಸಿದ ಬಗ್ಗೆ ಎಫ್‌ಐಆರ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News