×
Ad

ಬೆಂಗಳೂರು | ಆ್ಯಸಿಡ್ ದಾಳಿ ಪ್ರಕರಣ: ವಾರವಾದರೂ ಸಿಗದ ಸುಳಿವು

Update: 2022-05-06 21:15 IST
photo- pti 

ಬೆಂಗಳೂರು, ಮೇ 6: ಪ್ರೀತಿ ನಿರಾಕರಿಸಿದರೆಂಬ ಕಾರಣಕ್ಕೆ 24 ವರ್ಷದ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿರುವ ಆರೋಪಿ ನಾಗೇಶ್ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ.

ಎಪ್ರಿಲ್ 28ರಂದು ಕೃತ್ಯ ಎಸಗಿ ನಾಗೇಶ್ ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ವಾರದಿಂದ ತನಿಖೆ ನಡೆಸಲಾಗುತ್ತಿದ್ದು, ಸುಳಿವು ಸಿಕ್ಕಿಲ್ಲ. ಲುಕ್‍ಔಟ್ ಸಹ ಹೊರಡಿಸಲಾಗಿದ್ದು, ಹೊರ ರಾಜ್ಯಕ್ಕೂ ವಿಶೇಷ ತಂಡಗಳು ಹೋಗಿವೆ ಎಂದು ಪೊಲೀಸರು ಹೇಳಿದರು.

ಗಾಯಗೊಂಡಿರುವ ಯುವತಿ, ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದೂ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News