ಮಂಗಳೂರು: ವಿಹಾರ ನೌಕೆಯಲ್ಲಿ ಜಾನಪದ ಸಂಭ್ರವು

Update: 2022-05-08 13:22 GMT

ಮಂಗಳೂರು : ನಾವು ವಿಶ್ವ ಸೌಹಾರ್ದ ಪ್ರಿಯರು ಎಂಬ ಘೋಷ ವಾಕ್ಯ ಸರಣಿ ಕಾರ್ಯಕ್ರಮದ ಅಂಗವಾಗಿ 31ನೇ ಅಂತರಾಷ್ಟ್ರೀಯ ವಿಹಾರ ನೌಕೆ ಜಾನಪದ ಸಂಭ್ರಮ ಕಾರ್ಯಕ್ರಮವು ನಗರದ ಬೊಕ್ಕಪಟ್ಣ ಸಮೀಪ ಚಲಿಸುವ ಅಬ್ಬಕ್ಕ ನೌಕೆಯಲ್ಲಿ ಜರಗಿತು.

ಮಂಜುನಾಥ್ ಎಜುಕೇಶನ್ ಟ್ರಸ್ಟ್ ರಿ. ಮಂಗಳೂರು ಮತ್ತು ಸ್ವಾಮಿ ಎಂಟರ್‌ಪ್ರೈಸಸ್ ಬೆಂಗಳೂರು ಜಂಟಿಯಾಗಿ ಆಯೋಜಿಸಿದ ಈ ಕಾರ್ಯಕ್ರಮವನ್ನು ರಾಜ್ಯ ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಉದ್ಘಾಟಿಸಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಅಧಿಕಾರಿ ಹೆಚ್. ಹೊಳೆಯಪ್ಪ, ಮುಂಬೈಯ ರಿಸರ್ವ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಡಾ. ಪ್ರಭಾ ಸುವರ್ಣ ಭಾಗವಹಿಸಿದ್ದರು.

ಇಂಟರ್‌ನ್ಯಾಷನಲ್ ಕಲ್ಚರಲ್ ಫೆಸ್ಟ್ ಆಫ್ ಕೌನ್ಸಿಲ್(ರಿ.) ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಸ್ವಾಗತಿಸಿ, ಪ್ರಾಸ್ತಾಕವಾಗಿ ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಾಯಕರಾದ ಕಿಕ್ಕೇರಿ ಕೃಷ್ಣಮೂರ್ತಿ, ಉಷಾ ಸುನಿಲ್, ನಾರಾಯಣ ಕುಲಕರ್ಣಿ ಬೆಂಗಳೂರು, ಮೈಲಾರಿ ಚಿಕ್ಕಣವರ ಧಾರವಾಡ, ಶ್ರೀನಿವಾಸ್, ಮುತ್ತೇಶ್ ಜಾನಪದ ಗೀತೆ ಮತ್ತು ಭಾವ ಗೀತೆಗಳನ್ನು ಹಾಡಿದರು.

ಕಾರವಾರದ ಕಲ್ಪನಾ ರಶ್ಮಿ ಕಲಾಲೋಕ ಇದರ ಗುರು ಸೂರ್ಯಪ್ರಕಾಶ್ ನಿರ್ದೇಶನದಲ್ಲಿ ಕೃಷ್ಣಾವತಾರ ಮತ್ತು ಆರ್ಯ ಯುವ ಸಂಘದ ಗುರು ಪೂರ್ಣಿಮಾರ ನಿರ್ದೇಶನದಲ್ಲಿ ಶಿವಪುರಾಣ ನೃತ್ಯ ರೂಪಕಗಳು ಜರಗಿದವು.

ಮಂಗಳೂರು ಮ್ಯಾಜಿಕ್ ಗ್ರೂಫ್ ಕೆ2ಎಸ್ ಇವರಿಂದ ರಸಮಂಜರಿ ನಡೆಯಿತು. ಮಂಜುನಾಥ್ ಪ್ರಾರ್ಥಿಸಿದರು. ರವಿ ಎಂ. ಕುಲಶೇಖರ ಮತ್ತು ವಿದಾತ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News