ವಿವಾಹಿತೆ ಕಾಣೆ
Update: 2022-05-09 21:48 IST
ಮಂಗಳೂರು : ನಗರದ ಮಠದ ಕಣಿ ಕ್ರಾಸ್ ರಸ್ತೆಯ ಗಾಂಧಿನಗರದ ಮನೆಯೊಂದರಲ್ಲಿ ವಾಸವಾಗಿದ್ದ ಶಶಿಧರ ಎಂಬವರ ಪತ್ನಿ ಗೀತಾ (36) ಎಂಬಾಕೆ ಮೇ 7ರಿಂದ ನಾಪತ್ತೆಯಾದ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಶಿಧರ ಕೂಲಿ ಕೆಲಸ ಮಾಡಲೆಂದು ನಾಲ್ಕು ತಿಂಗಳ ಹಿಂದೆ ಮಂಗಳೂರಿಗೆ ಬಂದಿದ್ದು, ಇತ್ತೀಚೆಗೆ ಹಣದ ವಿಚಾರಕ್ಕೆ ಸಂಬಂಧಿಸಿ ಪತಿ ಮತ್ತು ಪತ್ನಿಯ ಮಧ್ಯೆ ಮನಸ್ತಾಪ ಉಂಟಾಗಿತ್ತು. ಆ ಸಿಟ್ಟಿನಿಂದ ಗೀತಾ ಮನೆಬಿಟ್ಟು ಹೋಗಿದ್ದು, ಈವರೆಗೆ ಮರಳಿ ಬಾರದ ಕಾರಣ ದೂರು ನೀಡಲಾಗಿದೆ.