×
Ad

ಮಂಗಳೂರು: ರಾಜ್ಯದ 5ನೆ ಪ್ರಾದೇಶಿಕ ಆಧಾರ್ ಸೇವಾ ಕೇಂದ್ರ ಉದ್ಘಾಟನೆ

Update: 2022-05-10 18:35 IST

ಮಂಗಳೂರು : ಯು.ಐ.ಡಿ.ಎ.ಐ  ವತಿಯಿಂದ  ಕರ್ನಾಟಕದ ಐದನೇ ಪ್ರಾದೇಶಿಕ ಆಧಾರ್ ಸೇವಾ ಕೇಂದ್ರವು ನಗರದ ಹಂಪನಕಟ್ಟೆಯ ಬಲ್ಮಠ ರಸ್ತೆಯಲ್ಲಿರುವ ಕ್ರಿಸ್ಟಲ್ ಆರ್ಕೇಡ್‌ನಲ್ಲಿ  ಮೇ 10ರಂದು ಉದ್ಘಾಟನೆಗೊಂಡಿತು.

ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ನೂತನ ಕೇಂದ್ರವನ್ನು ಉದ್ಘಾಟಿಸಿ  ಕೇಂದ್ರ ಸಂಪೂರ್ಣ ವಾಗಿ ಆಧಾರ್ ಸೇವೆಗಳಿಗೆ ಸಂಬಂಧಿಸಿದ್ದು ಜನರಿಗೆ ತ್ವರಿತಗತಿಯಲ್ಲಿ  ಎಲ್ಲಾ ರೀತಿಯ  ಸೇವೆಗಳು ಲಭ್ಯವಾಗಲಿದೆ ಎಂದರು.

ಮುಖ್ಯ ಅತಿಥಿಯಾಗಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ ಶುಭ ಹಾರೈಸಿದರು.

ಸೆಂಟರ್ ಮ್ಯಾನೇಜರ್ ಬಾಲಕೃಷ್ಣ ಅವರು ಸೇವಾಕೇಂದ್ರದ ಬಗ್ಗೆ ವಿವರಿಸಿ ಸೇವಾ ಕೇಂದ್ರವು ಬೆಳಗ್ಗೆ 9.30 ರಿಂದ ಸಂಜೆ 5.30ರ ವರೆಗೆ  ಕಾರ್ಯನಿರ್ವಹಿಸಲಿದ್ದು ಆಧಾರ್ ನೋಂದಣಿ, ಆಧಾರ್ ಡೆಮೋಗ್ರಫಿಕ್ ಹಾಗೂ ಆಧಾರ್ ಬಯೋಮೆಟ್ರಿಕ್ ಸೇವೆಗಳು ಇಲ್ಲಿ ಲಭ್ಯವಿದೆ.

ಯು.ಐ.ಡಿ.ಎ.ಐ ಈಗಾಗಲೇ  ಮೈಸೂರು, ಧಾರವಾಡ, ಬೆಂಗಳೂರು ದಾವಣಗೆರೆಯಲ್ಲಿ ಪ್ರಾದೇಶಿಕವಾಗಿ  ಸೇವಾ ಕೇಂದ್ರಗಳನ್ನು ಆರಂಭಿಸಿದ್ದು  ಮಂಗಳೂರಿನ ಸೇವಾ ಕೇಂದ್ರ ರಾಜ್ಯದ 5 ನೇ ಹಾಗೂ ದೇಶದ 84 ನೇ  ಕೇಂದ್ರವಾಗಿದೆ. ಮಂಗಳೂರು ಸೇವಾ ಕೇಂದ್ರದಲ್ಲಿ 20 ಮಂದಿ ಸಿಬ್ಬಂದಿ ಇದ್ದು  ಆಧಾರ್‌ಗೆ ಸಂಬಂಧಿಸಿ ಜನತೆಗೆ ತ್ವರಿತ ಸೇವೆ  ದೊರೆಯಲಿದೆ. ವಾರದ  ಏಳು ದಿನಗಳ ಕಾಲವೂ ಕಾರ್ಯಾಚರಿಸಲಿದೆ  ಎಂದರು.

ಆಧಾರ್‌ ಸೇವಾ ಕೇಂದ್ರದ ಪ್ರಾದೇಶಿಕ ಮ್ಯಾನೇಜರ್ ಗಜೇಂದ್ರ, ದಾವಣಗೆರೆ ಕೇಂದ್ರದ ಮ್ಯಾನೇಜರ್ ಪ್ರಜ್ವಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News