×
Ad

ಮೇ 11, 12: ವಿದ್ಯುತ್ ವ್ಯತ್ಯಯ

Update: 2022-05-10 22:05 IST

ಮಂಗಳೂರು : ಕುಲಶೇಖರ ಉಪ ಕೇಂದ್ರದಿಂದ ಹೊರಡುವ ನೀರುಮಾರ್ಗ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಮೇ ೧೧ರ ಬೆಳಗ್ಗೆ ೧೦ ರಿಂದ ಸಂಜೆ ೫ರವರೆಗೆ ಭಟ್ರಕೋಡಿ, ನೀರುಮಾರ್ಗ, ಕೆಲರಾಯಿ, ತಾರಿಗುಡ್ಡೆ, ಭಟ್ರಬೈಲು, ಮಾಣೂರು, ಬಿತ್ತುಪಾದೆ, ಮಲ್ಲೂರು, ಬದ್ರಿಯಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

*ನಗರದ ನೆಹರೂ ಮೈದಾನದ ಉಪಕೇಂದ್ರದಿಂದ ಹೊರಡುವ ಸೌತ್‌ವಾರ್ಫ್ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಮೇ ೧೨ರ ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಹ್ಯಾಮಿಲ್ಟನ್ ಸರ್ಕಲ್, ಧಕ್ಕೆ, ಓಲ್ಡ್ ಪೋರ್ಟ್ ರೋಡ್,ಬದ್ರಿಯಾ ರೋಡ್, ಬಾಂಬೆ ಬಝಾರ್, ನೀರೇಶ್ವಲ್ಯ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

*ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ ಮತ್ತು ಬೋಳಾರ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಗಳು ನಡೆಯುವ ಕಾರಣ  ಮೇ.೧೨ರ ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಬಾಬುಗುಡ್ಡೆ ೪ನೇ ಕ್ರಾಸ್, ಮಾರ್ನಮಿ ಕಟ್ಟೆದ್ವಾರ, ಜೆಪ್ಪುಮಾರ್ಕೆಟ್, ಮಂಗಳಾದೇವಿ ಮುಖ್ಯರಸ್ತೆ, ಬೋಳಾರ ಮುಖ್ಯರಸ್ತೆ, ಟೈಲರಿ ರಸ್ತೆ, ಛೆರಿ ರಸ್ತೆ, ಮುಳಿಹಿತ್ಲು, ಎಮ್ಮೆಕೆರೆ, ಪಿಂಟೋ ಕಾಂಪೌಂಡ್, ಹೊಗೆ ಬಜಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News