ಆ್ಯಸಿಡ್ ದಾಳಿ ಪ್ರಕರಣದ ಆರೋಪಿಯನ್ನು ಬಂಧಿಸಿದ ಪೊಲೀಸ್ ತಂಡಗಳಿಗೆ 5 ಲಕ್ಷ ರೂ. ಬಹುಮಾನ: ಆಯುಕ್ತ ಕಮಲ್ ಪಂತ್

Update: 2022-05-14 12:50 GMT

ಬೆಂಗಳೂರು: ಯುವತಿ ಮೇಲೆ‌ ಆ್ಯಸಿಡ್ ದಾಳಿ ಮಾಡಿ ತಮಿಳುನಾಡಿನ ತಿರುವಣ್ಣಾಮಲೈ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್​​​ನನ್ನು ಬಂಧಿಸಲಾಗಿದೆ ಎಂದು ಅಧಿಕೃತವಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.

ನಗರದ ಕಮಿಷನರ್​​ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ ಪೊಲಿಸ್ ತಂಡಗಳಿಗೆ ಒಟ್ಟು 5 ಲಕ್ಷ ರೂ. ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ. 

ಇದನ್ನೂ ಓದಿ... ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಪರಾರಿಯಾಗಲೆತ್ನಿಸಿದ ಆರೋಪಿ ನಾಗೇಶ್ ಗೆ ಗುಂಡೇಟು

50 ಮಂದಿ ಸಿಬ್ಬಂದಿ ಸೇರಿ ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು. 

ಡಿಸಿಪಿ ಸಂಜೀವ್ ಪಾಟೀಲ್ ಎಸಿಪಿ ರವಿ ಇನ್ಸ್ ಪೆಕ್ಟರ್ ಪ್ರಶಾಂತ್ ತಂಡ ನೇತೃತ್ವದಲ್ಲಿ ಆರೋಪಿಯನ್ನು ಪತ್ತೆ ಹಚ್ಚಲು ತಂಡ ರಚನೆಯಾಗಿತ್ತು. ಆದರೆ, ಆರೋಪಿ ನಾಗೇಶ್ ಸುಳಿವು ಬಿಡದೇ ನಾಪತ್ತೆಯಾಗಿದ್ದ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News