×
Ad

ಐಸಿಎಸ್‌ಐ. ಸಂಸ್ಥೆಯ ವಾರ್ಷಿಕ ಸಮ್ಮೇಳನ

Update: 2022-05-14 18:40 IST

ಮಂಗಳೂರು : ಭಾರತೀಯ ವಾಣಿಜ್ಯ ಸಂಸ್ಥೆಯ ಕಾರ್ಯದರ್ಶಿಗಳ ಮಂಗಳೂರು ಘಟಕದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಸಮಾವೇಶ ಕಾರ್ಪೋರೇಟ್ ಪಂಡಿತ್ (ವಾರ್ಷಿಕ ಸಮ್ಮೇಳನ) ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮೆಸ್ಕಾಂ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಕಾರ್ಯದರ್ಶಿಗಳ ಸೇವಾವಧಿಯಲ್ಲಿ ಉನ್ನತ ಮಟ್ಟದ ಜವಾಬ್ದಾರಿ ಮತ್ತು ಸವಾಲುಗಳು ಎದುರಿಸುವ ಸನ್ನಿವೇಶಗಳಿವೆ, ಅದನ್ನು ಯಶಸ್ವಿಯಾಗಿ ಎದುರಿಸಲು ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ನಿರ್ಗಮನ ರಾಷ್ಟ್ರಾಧ್ಯಕ್ಷ ನಾಗೇಂದ್ರ ರಾವ್, ಪ್ರಾದೇಶಿಕ ಅಧ್ಯಕ್ಷ ಶೇಖರ್ ಬಾಬು ಮಾತನಾಡಿದರು. ಸಂಸ್ಥೆಯ ರಾಷ್ಟ್ರಾಧ್ಯಕ್ಷ ದೇವೆಂದ್ರ ದೇಶ್‌ಪಾಂಡೆ ಶೈಕ್ಷಣಿಕ ಕಾರ್ಯಗಾರ ನಡೆಸಿಕೊಟ್ಟರು.

ಸಂಸ್ಥೆಯ ಅಧ್ಯಕ್ಷ ಆಕ್ಷಯ್ ಆರ್. ಶೇಟ್ ಸ್ವಾಗತಿಸಿದರು, ಕಾರ್ಯದರ್ಶಿ ರಾಕೇಶ್ ನಾಯಕ್ ವಂದಿಸಿದರು. ಉಪಾಧ್ಯಕ್ಷೆ ಸೋನಾಲಿ ಮಲ್ಯ ಪೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News