ಅಮೆರಿಕ: ಎರಡು ಪ್ರತ್ಯೇಕ ಗುಂಡಿನ ದಾಳಿಯಲ್ಲಿ ಮೂವರು ಮೃತ್ಯು

Update: 2022-05-16 05:01 GMT

ನ್ಯೂಯಾರ್ಕ್: ಅಮೆರಿಕದಲ್ಲಿ ಕಳೆದ ರಾತ್ರಿ ಎರಡು ಪ್ರತ್ಯೇಕ ಗುಂಡಿನ ದಾಳಿಗಳು ವರದಿಯಾಗಿದ್ದು, ಕನಿಷ್ಠ ಮೂವರನ್ನು ಕೊಲ್ಲಲಾಗಿದೆ.  ನ್ಯೂಯಾರ್ಕ್ ರಾಜ್ಯದ ಕಿರಾಣಿ ಅಂಗಡಿಯೊಂದರಲ್ಲಿ 10 ಜನರನ್ನು ಗುಂಡಿಕ್ಕಿ ಕೊಂದ ಒಂದು ದಿನದ ನಂತರ ಈ ಘಟನೆಗಳು ನಡೆದಿವೆ.

ಔತಣಕೂಟದ ವೇಳೆ ಲಾಸ್ ಏಂಜಲೀಸ್ ಬಳಿಯ ಚರ್ಚ್‌ನಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದಾಗ ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನು ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಏಶ್ಯದ 60 ರ ವಯಸ್ಸಿನ  ವ್ಯಕ್ತಿ ಎಂದು ನಂಬಲಾದ ಬಂದೂಕುಧಾರಿಯನ್ನು ತರುವಾಯ ಚರ್ಚ್‌ಗೆ ಬಂದವರು ಬಂಧಿಸಿದರು ಆತನಿಂದ ಕನಿಷ್ಠ ಎರಡು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ ಎಂದು ಸುದ್ದಿಸಂಸ್ಥೆ ಎಎಫ್ ಪಿ ವರದಿ ಮಾಡಿದೆ.

ಮೃತಪಟ್ಟವರು  ಹೆಚ್ಚಾಗಿ ಏಷ್ಯನ್ ಮತ್ತು ತೈವಾನ್ ಮೂಲದವರು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ವರದಿಗಳು ತಿಳಿಸಿವೆ.

ಫ್ಲೀ ಮಾರ್ಕೆಟ್‌ನಲ್ಲಿ ಅನೇಕ ಜನರಿಗೆ ಗುಂಡು ಹಾರಿಸಲಾಯಿತು ಹಾಗೂ  ಅವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಏತನ್ಮಧ್ಯೆ, ಟೆಕ್ಸಾಸ್‌ನಲ್ಲಿ ಹ್ಯಾರಿಸ್ ಕೌಂಟಿ ಶೆರಿಫ್‌ನ ಕಛೇರಿಯು ದೃಢಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News