ಹಳೆಕೋಟೆಯಲ್ಲಿ ಶಾಲಾ ಪ್ರಾರಂಭೋತ್ಸವ-2022

Update: 2022-05-16 12:02 GMT

ಉಳ್ಳಾಲ : ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುವ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯಿದ್ ಮದನಿ ಪ್ರೌಢ ಶಾಲೆಯಲ್ಲಿ 2022-23 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹಾರವರ ಅಧ್ಯಕ್ಷತೆಯಲ್ಲಿ ಜರುಗಿತು.

ಶಾಲಾ ಸಂಚಾಲಕರಾದ ಮಹಮ್ಮದ್ ಇಸ್ಮಾಯಿಲ್ ಹಾಜಬ್ಬರವರು ದಾಖಲಾತಿ ಅರ್ಜಿಯನ್ನು ತುಂಬಿಸುವುದರ ಮೂಲಕ ದಾಖಲಾತಿ ಉದ್ಘಾಟಿಸಿದರು.

ಹಳೆಕೋಟೆ ಮಸ್ಜಿದ್ ಖತೀಬ್ ಸಿರಾಜುದ್ದೀನ್ ಹಿಮಮಿ ಸಖಾಫಿ‌ ನೇತೃತ್ವದಲ್ಲಿ ಬದ್ರ್  ಮೌಲೂದ್ ಪಾರಾಯಣ ನಡೆಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಡೆಂಗ್ ದಿನದ ಅಂಗವಾಗಿ ಡೆಂಗ್ ರೋಗದ  ಮುನ್ನೆಚರಿಕಾ ಕ್ರಮಗಳನ್ನು ಶಾಲಾ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿ ರಕ್ಷಕರಿಗೆ ತಿಳಿಸಿದರು.‌ ಉಳ್ಲಾಲ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಝರೀನ ರವೂಫ್ ಹೊಸತಾಗಿ ದಾಖಲಾದ ಮಕ್ಕಳಿಗೆ ಗುಲಾಬಿ ಹೂವನ್ನು ನೀಡಿ ಸ್ವಾಗತಿಸಿದರು.

ಈ ಸಂದರ್ಭ ಉಳ್ಳಾಲ ಸಿಅರ್ ಪಿ ಮೋಹನ್ ಕುಮಾರ್, ಶಾಲಾ ಕಾರ್ಯದರ್ಶಿ ಅಲ್ತಾಫ್, ಸದಸ್ಯ ಝೈನುದ್ದೀನ್ ಹಾಜಿ, ವಿದ್ಯಾರ್ಥಿ ರಕ್ಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News