ಮಂಗಳೂರು : "ಬಿಐಟಿ"ಯಿಂದ ಸಿಇಟಿ ಮತ್ತು ನಾಟಾ ಆಕಾಂಕ್ಷಿಗಳಿಗೆ ಉಚಿತ ಆನ್‌ಲೈನ್ ತರಬೇತಿ

Update: 2022-05-17 10:50 GMT

ಮಂಗಳೂರು : ಸಿಇಟಿ ಮತ್ತು ನಾಟಾಗೆ 2022ರಲ್ಲಿ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳು ಮಂಗಳೂರಿನ ಬ್ಯಾರಿಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಒದಗಿಸುವ ಉಚಿತ ಆನ್‌ಲೈನ್‌ ತರಬೇತಿಯ ಸಹಾಯದಿಂದ ಪರೀಕ್ಷೆಗಳಿಗೆ ತಯಾರಿ ಮಾಡಬಹುದು.

2022ರ ಮೇ 20ರಿಂದ ಜೂನ್ 10ರ ತನಕ ಸುಮಾರು 20 ದಿನಗಳ ಕಾಲ ಆನ್‌ಲೈನ್‌ ಕೋಚಿಂಗ್ ನಡೆಯಲಿದೆ. ವಿಷಯದ ತಜ್ಞರು ಪ್ರತಿದಿನ 4 ಗಂಟೆಗಳ ಕಾಲ ತರಗತಿಗಳನ್ನು ತೊಡಗಿಸಿಕೊಳ್ಳಲಿದ್ದಾರೆ.

ಸಿಇಟಿ/ನಾಟಾ ಪ್ರಾಕ್ಟಿಸ್ ಮತ್ತು ಅಣಕು ಪರೀಕ್ಷೆಗಳು, ಯಾವುದೇ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳನ್ನು ಹೆಚ್ಚು ಸುಲಭವಾಗಿ ಪರಿಹರಿಸಲು ಉಪಯೋಗವಾಗಲಿದೆ. ನೋಂದಣಿಗೆ ಕೊನೆಯ ದಿನಾಂಕ: 19/05/2022 ಎಂದು ಪ್ರಕಟನೆ ತಿಳಿಸಿದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 

9900066888/7259661177 ಅಥವಾ admissions@bitmangalore.edu.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News