ಡೆಂಗ್ಯು ಭೀತಿ: ಉಡುಪಿ ತಾಲೂಕಿನಾದ್ಯಂತ ಆಲರ್ಟ್

Update: 2022-05-18 13:37 GMT

ಉಡುಪಿ: ಕೊಲ್ಲೂರು ಮುದೂರಿನಲ್ಲಿ ಡೆಂಗ್ಯು ಪ್ರಕರಣ ಹೆಚ್ಚಾಗಿ ಕಂಡುಬಂದಿರುವುದರಿಂದ ಉಡುಪಿ ತಾಲೂಕಿನಾ ದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ರೀತಿಯ ಜ್ವರ ಕಂಡುಬಂದವರನ್ನು ರಕ್ತಪರೀಕ್ಷೆಗೆ ಒಳಪಡಿಸಲಾಗು ತ್ತಿದೆ. ಉಡುಪಿ ತಾಲೂಕಿನಲ್ಲಿ ಕಳೆದ ಜನವರಿಂದ ಈವರೆಗೆ 21 ಹಾಗೂ ಎಪ್ರಿಲ್‌ನಿಂದ ನಾಲ್ಕು ಡೆಂಗ್ಯು ಪ್ರಕರಣಗಳು ವರದಿಯಾಗಿವೆ ಎಂದು ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ ತಿಳಿಸಿದ್ದಾರೆ.

ಉಡುಪಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಬಾಬು ಎಂ. ಅಧ್ಯಕ್ಷತೆ ಯಲ್ಲಿ ಬುಧವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡುತಿದ್ದರು. ಕೊರೋನಾ ಲಸಿಕೆಯಲ್ಲಿ ನಾವು ಗುರಿ ಸಾಧನೆ ಮಾಡಿದ್ದೇವೆ. 60 ವರ್ಷ ಮೇಲ್ಪಟ್ಟವರಿಗೆ ಸರಕಾರ ಉಚಿತವಾಗಿ ಬೂಸ್ಟರ್ ಡೋಸ್ ನೀಡುತ್ತಿದ್ದು, ಅದಕ್ಕಿಂತ ಕೆಳಗಿನವರು ಹಣ ಕೊಟ್ಟು ಪಡೆಯಬೇಕಾಗುತ್ತದೆ. ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದರು.

ನಮ್ಮ ಜಿಲ್ಲೆಯಲ್ಲಿ ಟೊಮೆಟೋ ಫ್ಲೂ ಎಲ್ಲೂ ಕಂಡುಬಂದಿಲ್ಲ. ಐದು ವರ್ಷ ಕೆಳಗಿನ ಮಕ್ಕಳಲ್ಲಿ ಕಂಡುಬರುವ ಈ ಕಾಯಿಲೆಯನ್ನು ಮುಂಬೈ ಅಥವಾ ಬೆಂಗಳೂರಿನ ಪ್ರಯೋಗಾಲಯದಲ್ಲಿಯೇ ಪರೀಕ್ಷೆ ಮಾಡಿಸಬೇಕಾಗುತ್ತದೆ. ತುರ್ತು ಚಿಕಿತ್ಸೆ ನೀಡುವ ಆರೋಗ್ಯ ಕ್ಷೇಮ ಕೇಂದ್ರ ಸ್ಥಾಪಿಸಲು ಅಗತ್ಯ ಕಟ್ಟಡ ಗಳನ್ನು ಗುರುತಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

15500 ಹೆಕ್ಟೇರ್ ಕೃಷಿ

1050 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ. ಈ ಬಾರಿ ೫೩೮ ಕ್ವಿಂಟಾಲ್ ದಾಸ್ತಾನು ಇರಿಸಲಾಗಿದೆ. ಕಳೆದ ಬಾರಿ ಎಂಓ ೪ ನೆರೆಯಿಂದ ಸಾಕಷ್ಟು ಹಾನಿ ಯಾಗಿದೆ. ಸುಣ್ಣ ಕೂಡ ದಾಸ್ತಾನು ಇದೆ. ಈ ಬಾರಿ ೧೫೫೦೦ ಹೆಕ್ಟೇರ್ ಕೃಷಿ ಮಾಡುವ ಗುರಿ ಹೊಂದಲಾಗಿದೆ ಎಂದು ಕೃಷಿ ಅಧಿಕಾರಿ ಮೋಹನ್‌ರಾಜ್ ಸಭೆಗೆ ಮಾಹಿತಿ ನೀಡಿದರು.

ಕೃಷಿ ಹೊಂಡ ಯೋಜನೆಯನ್ನು ಕಳೆದ ಎರಡು ವರ್ಷಗಳಿಂದ ಸ್ಥಗಿತ ಗೊಂಡಿದೆ. ಅದಕ್ಕೆ ಬದಲು ಸಮಗ್ರ ಕೃಷಿ ಯೋಜನೆ ಜಾರಿಗೆ ತರಲಾಗಿದೆ. ಅದರಲ್ಲಿ ಒಂದು ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಈಗಾಗಲೇ ಈ ಯೋಜನೆಯಡಿ ೩೨ ಮಂದಿಯ ಪ್ರಸ್ತಾವ ಕಳುಹಿಸಲಾಗಿದೆ. ಅದರಲ್ಲಿ 20 ಮಂದಿಗೆ ಆನ್‌ಲೈನ್ ಪಾವತಿಯಾಗಿದೆ ಎಂದು ಅವರು ತಿಳಿಸಿದರು.

ಗುರಿ ಸಾಧನೆಯಲ್ಲಿ ಹಿನ್ನೆಡೆ

ಮಾತೃ ಪೂರ್ಣ ಯೋಜನೆಯಡಿ ಶೇ.೨೦ರಷ್ಟು ಗರ್ಭಿಣಿಯರು ಹಾಗೂ ಶೇ.೧೬ರಷ್ಟು ಬಾಣಂತಿಯರು ಅಂಗನವಾಡಿ ಕೇಂದ್ರಕ್ಕೆ ಬಂದು ಊಟ ಮಾಡು ತ್ತಿದ್ದು, ಇದರಲ್ಲಿ ಶೇಕಡವಾರು ಕಡಿಮೆ ಆಗಿರುವುದರಿಂದ ಇಲಾಖೆಯ ಒಟ್ಟಾರೆ ಸಾಧನೆಗೆ ಹಿನ್ನಡೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪನಿರ್ದೇಶಕಿ ವೀಣಾ ತಿಳಿಸಿದರು.

ಹೆಣ್ಣು ಮಕ್ಕಳ ಹಾಸ್ಟೆಲ್‌ಗಳಲ್ಲಿ ಆತಂರಿಕ ಸಮಿತಿಯನ್ನು ರಚಿಸಿ, ಹೆಣ್ಣು ಮಕ್ಕಳಿಗೆ ಆಗುವ ಸಮಸ್ಯೆಗಳನ್ನು ಆಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಡಳಿತಾಧಿಕಾರಿ ಬಾಬು ಎಂ., ಸಮಾಜ ಕಲ್ಯಾಣ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.

ಕಲ್ಯಾಣಪುರ ಸಂತೆಕಟ್ಟೆ ಹಾಗೂ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ೬೬ರ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಆರ್ಥಿಕ ಬಿಡ್ಡಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಅದರ ನಂತರ ಕಾಮಗಾರಿ ಆರಂಭಗೊಳ್ಳ ಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿವೇಕಾನಂದ ಗಾಂವ್ಕರ್, ತಹಶೀಲ್ದಾರ್ ಅರ್ಚನಾ ಭಟ್, ತಾಪಂ ಸಹಾಯಕ ನಿರ್ದೇಶಕ ವಿಜಯಾ ಉಪಸ್ಥಿತರಿದ್ದರು.

9 ಗ್ರಾಮಕ್ಕೆ ಒಂದು ಶಾಲೆಗಳ ಪ್ರಸ್ತಾವ

ಗ್ರಾಮಕ್ಕೆ ಒಂದು ಶಾಲೆ ಯೋಜನೆಯಲ್ಲಿ ತಾಲೂಕಿನ ಒಂಭತ್ತು ಶಾಲೆಗಳನ್ನು ಗುರುತಿಸಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಮುಂದೆ ಈ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಾದರಿ ಶಾಲೆಗಳನ್ನಾಗಿ ಮಾಡಲಾಗುವುದು ಎಂದು ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ತಿಳಿಸಿದರು.

೮೦ ಪ್ರಾಥಮಿಕ ಶಿಕ್ಷಕ ಹುದ್ದೆಗೆ ಮೊದಲ ಹಂತದಲ್ಲಿ ೪೩ ಅತಿಥಿ ಶಿಕ್ಷಕರ ಹುದ್ದೆ ಮಂಜೂರಾಗಿದೆ. ೩೦ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಿಗೆ ೨೮ ಅತಿಥಿ ಶಿಕ್ಷಕರನ್ನು ನೇಮಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಸಮವಸ್ತ್ರವನ್ನು ಶಿಕ್ಷಕರ ದಿನಾಚರಣೆ ಸಂದರ್ಭ ವಿತರಿಸಲು ಯೋಜಿಸಲಾಗಿದೆ. ಸೈಕಲ್ ವಿತರಣೆ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News