ತುಂಬೆ: ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ

Update: 2022-05-18 17:04 GMT

ಮಂಗಳೂರು : ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ತುಂಬೆ 2022-23ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಂಸ್ಥೆಯು ಕೇಂದ್ರ ಸರಕಾರ National Council for Vocational Training (NCVT) ನವದೆಹಲಿಯ ಸಂಯೋಜನೆಗೊಂಡಿದ್ದು, ಮತ್ತು ಕರ್ನಾಟಕ ಸರಕಾರ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ನಿದೇರ್ಶನಾಲಯ ಬೆಂಗಳೂರು ಇದರ ಮಾನ್ಯತೆಯನ್ನು ಪಡೆದಿರುತ್ತದೆ.

ಸಂಸ್ಥೆಯಲ್ಲಿ ಎರಡು ವರ್ಷದ ತಾಂತ್ರಿಕ ತರಬೇತಿ ಕೋರ್ಸುಗಳಾದ ಮೆಕ್ಯಾನಿಕ್ ರೆಫ್ರಿಜರೇಶನ್ ಮತ್ತು ಏರ್ ಕಂಡೀಶನಿಂಗ್ ಹಾಗೂ ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಒಂದು ವರ್ಷದ ತರಬೇತಿಯಾದ ಡೀಸೆಲ್ ಮೆಕ್ಯಾನಿಕ್ ಮತ್ತು ವೆಲ್ಡರ್ ಕೋರ್ಸುಗಳ ತರಬೇತಿಯನ್ನು ನೀಡಲಾಗುತ್ತದೆ.

ಈ ಎಲ್ಲಾ ತರಬೇತಿಯನ್ನು ಪಡೆಯಲು ಕನಿಷ್ಟ ಎಸ್.ಎಸ್.ಎಲ್.ಸಿ ಉತ್ತೀರ್ಣ/ಅನುತ್ತೀರ್ಣ, ಪಿ.ಯು.ಸಿ ಉತ್ತೀರ್ಣ /ಅನುತ್ತೀರ್ಣ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ವರ್ಷದ ದಾಖಲಾತಿಯು ಪ್ರಾರಂಭವಾಗಿದೆ.

ಪ.ಜಾತಿ/ಪ.ಪಂಗಡ/ಅಲ್ಪಸಂಖ್ಯಾತ/ಹಿಂದುಳಿದ ವರ್ಗಗಳಿಗೆ/ ಕಾರ್ಮಿಕ ಇಲಾಖೆ ಸ್ಕಾಲರ್ ಶಿಪ್, ಅರಿವು ಲೋನ್, ಬೀಡಿ ಸ್ಕಾಲರ್ ಶಿಪ್, ವಿದ್ಯಾಸಿರಿ ಸ್ಕಾಲರ್ ಶಿಪ್ ಹಾಗೂ ಮತ್ತಿತರ ಸ್ಕಾಲರ್ ಶಿಪ್‍ಗಳಿಗೆ ಅರ್ಜಿಸಲ್ಲಿ ಸಲು ಸಂಸ್ಥೆಯಿಂದಲೇ ವ್ಯವಸ್ಥೆ ಮಾಡಿಕೊಡಲಾಗುವುದು. ಸಂಸ್ಥೆಯಲ್ಲಿ ಮೋಟಾರ್ ಡ್ರೈವಿಂಗ್ ತರಬೇತಿ ನೀಡಲಾಗುತ್ತಿದ್ದು ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು  ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕಿಸಬೇಕಾದ ವಿಳಾಸ: ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ ತುಂಬೆ–9449639916, 9740271005

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News