ಎಸೆಸೆಲ್ಸಿ: ದಾರುಲ್ ಇರ್ಶಾದ್ ಗೆ 100 ಶೇ. ಫಲಿತಾಂಶ

Update: 2022-05-19 10:15 GMT
ಸಾಂದರ್ಭಿಕ ಚಿತ್ರ

ಮಾಣಿ, ಮೇ 19: ದಾರುಲ್ ಇರ್ಶಾದ್ ಎಜುಕೇಶನಲ್ ಸೆಂಟರ್ ಅಧೀನದ ಮಿತ್ತೂರು ಕೆಜಿಎನ್ ಕ್ಯಾಂಪಸ್ ನ ದಾರುಲ್ ಇರ್ಶಾದ್ ವಸತಿ ಸಹಿತ ಬಾಲಕರ ಪ್ರೌಢಶಾಲೆಯು 2021-22ರ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 100 ಶೇ. ಫಲಿತಾಂಶ ದಾಖಲಿಸಿದೆ.

 16 ವಿದ್ಯಾರ್ಥಿಗಳು ಎ ಗ್ರೇಡ್, 7 ವಿದ್ಯಾರ್ಥಿಗಳು ಬಿ+ ಗ್ರೇಡ್  9 ವಿದ್ಯಾರ್ಥಿಗಳು ಬಿ ಗ್ರೇಡ್ ಗಳಿಸಿದ್ದಾರೆ. ಮುಹಮ್ಮದ್ ಅಸ್ಲಮ್ ಮಾಲಾಡಿ ಮಡಂತ್ಯಾರು 559 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾದರೆ, ಮುಹಮ್ಮದ್ ಅಮೀನ್ ಪಿ. ಮುಡಿಪು 551 ಗಳಿಸಿ ದ್ವಿತೀಯ, ಮುಹಮ್ಮದ್ ಸಲೀಂ ಮಾವಿನಕಟ್ಟೆ ಅಳಿಕೆ 549 ತೃತೀಯ ಸ್ಥಾನ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News