ನನ್ನ ಟಾರ್ಗೆಟ್ ಶೇ. 100 ಅಂಕವಾಗಿತ್ತು: 625 ಅಂಕ ಗಳಿಸಿರುವ ಮುಲ್ಕಿಯ ವೀಕ್ಷಾ ಶೆಟ್ಟಿ

Update: 2022-05-19 10:35 GMT

ಮಂಗಳೂರು, ಮೇ 19: ನಾನು ಯಾವತ್ತೂ ಪರೀಕ್ಷೆಗಳಲ್ಲಿ ಶೇ.100 ಗುರಿಯನ್ನಿಟ್ಟುಕೊಂಡೇ ಅಭ್ಯಾಸ ಮಾಡುತ್ತಿದ್ದೆ. ಅದು ಎಸೆಸೆಲ್ಸಿಯ ಅಂತಿಮ ಪರೀಕ್ಷೆಯ ಫಲಿತಾಂಶದೊಂದಿಗೆ ಅದು ನಿಜವಾಗಿರುವುದು ಸಂತಸವಾಗಿದೆ ಎಂದು ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 100 ಶೇ. (625ರಲ್ಲಿ 625) ಅಂಕ ಗಳಿಸಿರುವ ಮುಲ್ಕಿ ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದ 10ನೇ ತರಗತಿ ವಿದ್ಯಾರ್ಥಿನಿ ವೀಕ್ಷಾ ವಿ. ಶೆಟ್ಟಿ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.

‘‘ನಾನು ಎಸೆಸೆಲ್ಸಿ ಆರಂಭದಿಂದಲೂ ಪ್ರತಿನಿತ್ಯ ಬೆಳಗ್ಗೆ ಸಂಜೆ ಸಮಯ ಸಿಕ್ಕಾಗ ಓದುತ್ತಿದ್ದೆ. ಪರೀಕ್ಷೆಯ ಸಂದರ್ಭದಲ್ಲಿ ರಿಲ್ಯಾಕ್ಸ್ ಆಗಿರುತ್ತಿದ್ದೆ. ಒತ್ತಡದಿಂದ ಓದುತ್ತಿರಲಿಲ್ಲ. ಶೇ. 100ರ ಗುರಿ ಇಟ್ಟು ಪರೀಕ್ಷೆ ಬರೆದಿದ್ದರೂ, ಬಳಿಕವೂ ನಾನು ಶೇ. 99ರಷ್ಟು ಅಂಕಗಳನ್ನು ನಿರೀಕ್ಷಿಸಿದ್ದೆ. ನನ್ನ ಓದಿಗೆ ನನ್ನ ಪೋಷಕರ ಜತೆಗೆ ಶಿಕ್ಷಕರು ಶಾಲೆಯಲ್ಲಿ ನೀಡುತ್ತಿದ್ದ ಸಹಕಾರ ಅತೀ ಮುಖ್ಯವಾಗಿತ್ತು. ಮುಂದೆ ಇಂಜಿನಿಯರ್ ಆಗಬೇಕೆಂಬ ಇರಾದೆ ಇದೆ’’ ಎಂದು ವೀಕ್ಷಾ ವಿ. ಶೆಟ್ಟಿ ತಿಳಿಸಿದ್ದಾರೆ.

ಮುಲ್ಕಿ ನಿವಾಸಿ ಕೃಷಿಕ ವೇದಾನಂದ ಶೆಟ್ಟಿ ಹಾಗೂ ಗೃಹಿಣಿ ವೀಣಾ ಶೆಟ್ಟಿಯವರ ಪುತ್ರಿಯಾದ ವೀಕ್ಷಾಗೆ ಗಾರ್ಡನಿಂಗ್ ಹವ್ಯಾಸವಿದ್ದು, ಅಂತರ್ ಶಾಲಾ ಮಟ್ಟದ ಭಾಷಣ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News