ಜೇನು ಕೃಷಿಗೆ ಅನುದಾನ ನೀಡಿ: ಬಸವರಾಜ್ ಎಸ್. ಹೊರಟ್ಟಿ

Update: 2022-05-19 12:36 GMT

ಬೆಂಗಳೂರು, ಮೇ 19: ರಾಜ್ಯದಲ್ಲಿ ಜೇನುಕೃಷಿ ಅಭಿವೃದ್ಧಿಗೆ ಅನುದಾನವನ್ನು ಮೀಸಲಿಡಬೇಕು ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಸವರಾಜ್ ಎಸ್. ಹೊರಟ್ಟಿ ಸರಕಾರಕ್ಕೆ ಒತ್ತಾಯಿಸಿದರು.

ಶಿವರಾಂ ರೀಸರ್ಚ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ನಗರದ ಕ್ಯಾಪಿಟಲ್ ಹೋಟೇಲ್‍ನಲ್ಲಿ ಜೇನುಕೃಷಿ ಬಗ್ಗೆ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ವಿದ್ಯಾವಂತ ಯುವಕರು ಪದವಿ ಪಡೆದನಂತರ ಕೃಷಿ ಮತ್ತು ಇನ್ನೀತರ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಈ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಸರಕಾರ ಅದಕ್ಕೆ ಸೂಕ್ತ ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು. 

ವೇಗಾ ಆಸ್ಪತ್ರೆ ಸಮೂಹದ ಮುಖ್ಯಸ್ಥ ಡಾ. ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ಕ್ಷೀರಕ್ರಾಂತಿ ನಡೆದಂತೆ ಜೇನುಕೃಷಿ ಕ್ರಾಂತಿ ನಡೆಯಬೇಕು ಎಂದು ಕರೆ ನೀಡಿದರು. 

ಕಾನ್ಫರೆನ್ಸ್ ನಲ್ಲಿ ನರೆ ರಾಜ್ಯಗಳ ಜೇನುಕೃಷಿ ತಜ್ಞರು ಸೇರಿದಂತೆ ವಿದ್ಯಾರ್ಥಿಗಳು ರೈತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News