ಎಸೆಸೆಲ್ಸಿಯಲ್ಲಿ 623 ಅಂಕ ಗಳಿಸಿದ ಇರ್ಫಾನ, 618 ಅಂಕಗಳಿಸಿದ ಆಫಿಲ್‌ರನ್ನು ಅಭಿನಂದಿಸಿದ ಪುತ್ತೂರು ಕಮ್ಯೂನಿಟಿ ಸೆಂಟರ್

Update: 2022-05-19 14:42 GMT

ಪುತ್ತೂರು: ಎಸೆಸೆಲ್ಸಿಯಲ್ಲಿ 623 ಅಂಕ ಗಳಿಸಿದ ಫಾತಿಮಾ ಇರ್ಫಾನ ಮತ್ತು 618 ಅಂಕಗಳಿಸಿದ ಮುಹಮ್ಮದ್ ಆಫಿಲ್‌‌ ರನ್ನು ಪುತ್ತೂರು ಕಮ್ಯೂನಿಟಿ ಸೆಂಟರ್ ಅಭಿನಂದಿಸಿದೆ.

ತಾಲೂಕಿನ ಬನ್ನೂರು ನಿವಾಸಿ ಅಹ್ಮದ್ ಇಕ್ಬಾಲ್ ಮತ್ತು ರಮ್ಲತ್ ದಂಪತಿಯ ಸುಪುತ್ರಿ ಫಾತಿಮಾ ಇರ್ಫಾನ ಎಸೆಸೆಲ್ಸಿಯಲ್ಲಿ 623 ಅಂಕಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಸುಧಾನ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಫಾತಿಮಾ ಇರ್ಫಾನರ ಸಾಧನೆಯನ್ನು ಗುರುತಿಸಿ ಪುತ್ತೂರು ಕಮ್ಯೂನಿಟಿ ಸೆಂಟರ್ ಇವರನ್ನು ಸನ್ಮಾನಿಸಿ ಗೌರವಿಸಿತು. ಸೆಂಟರಿನ ವಿದ್ಯಾರ್ಥಿನಿ ವಿಂಗ್ ನ ಮೂಲಕ ಈ ಸನ್ಮಾನ ನೆರವೇರಿಸಲಾಯಿತು.

ಸುಳ್ಯ ಅಡ್ಕಾರ್ ನ ಜಿ.ಎಂ. ಅಬ್ದುಲ್ಲಾ ಮತ್ತು ರಹಮತ್ತ್ ನಿಶಾ ದಂಪತಿಯ ಪುತ್ರ ಮುಹಮ್ಮದ್ ಆಫಿಲ್ ಎಸೆಸೆಲ್ಸಿಯಲ್ಲಿ 618 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದು, ಅವರನ್ನು ಗುರುತಿಸಿ ಸೆಂಟರ್ ಮೂಲಕ ಅಭಿನಂಧಿಸಲಾಯಿತು. ಸೈಂಟ್ ಜೋಸೆಫ್ ಸ್ಕೂಲ್ ಸುಳ್ಯ ಇಲ್ಲಿನ ವಿದ್ಯಾರ್ಥಿಯಾದ ಆಫಿಲ್ ಅವರನ್ನು ಆಶಿಕ್ ಅರಿಯಡ್ಕ ಸನ್ಮಾನಿಸಿ, ಗೌರವಿಸಿದರು.

ಪುತ್ತೂರು ಕಮ್ಯೂನಿಟಿ ಸೆಂಟರ್ ನ ಅರ್ಹತಾ ಪರೀಕ್ಷೆಯಲ್ಲೂ ಆಫಿಲ್ ಸಾಧನೆ ಮಾಡಿದ್ದು, ಅವರು ಬಯಸಿದ ಕಾಲೇಜಿನಲ್ಲಿ ಪಿಯುಸಿಗೆ ದಾಖಲಾಗಲು ಸೆಂಟರ್ ವಿದ್ಯಾರ್ಥಿ ವೇತನ ನೀಡಲಿದೆ.

ಶೈಕ್ಷಣಿಕ ಪ್ರಗತಿಗೆ ದುಡಿಯುತ್ತಿರುವ ಪುತ್ತೂರು ಕಮ್ಯೂನಿಟಿ ಸೆಂಟರ್ ಎಸೆಸೆಲ್ಸಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಕೌನ್ಸಿಲಿಂಗ್ ನಡೆಸಲಿದೆ.

ಪುತ್ತೂರು, ವಿಟ್ಲ, ಮಂಗಳೂರು ಸೆಂಟರಿನಲ್ಲಿ 21-5-2022 ರಿಂದ 30-5-2022 ರವರೆಗೆ ಈ ಕೌನ್ಸಿಲಿಂಗ್ ನಡೆಯಲಿದೆ. ನುರಿತ ಶಿಕ್ಷಣ ತಜ್ಞರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದು, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನೂ ನೀಡಲಿದೆ ಎಂದು ಸೆಂಟರ್ ನ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News