ಮೇ 22ರಂದು ಟೆಡೆಕ್ಸ್ ಭಾಷಣ ಸರಣಿ ಕಾರ್ಯಕ್ರಮ

Update: 2022-05-20 07:11 GMT

ಮಂಗಳೂರು : ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಟೆಡೆಕ್ಸ್ ಭಾಷಣ ಸರಣಿ ಕಾರ್ಯಕ್ರಮ ಮೇ 22ರಂದು ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಪ್ರವೀಣ್ ಮಾರ್ಟಿಸ್ ಎಸ್.ಜೆ., ಅಂದು ಬೆಳಗ್ಗೆ 8.20ರಿಂದ ನೋಂದಣಿ ಆರಂಭವಾಗಲಿದ್ದು, 9 ಗಂಟೆಯಿಂದ ಉಪನ್ಯಾಸ ಕಾರ್ಯಕ್ರಮ ಆರಂಭವಾಗಲಿದೆ. ‘ಅಜ್ಞಾತದೊಂದಿಗೆ ಒಂದಾಗಿ’ ಆಶಯದಡಿ ಕಾರ್ಯಕ್ರಮ ನಡೆಯಲಿದೆ ಎಂದರು.

ವ್ಯಕ್ತಿಯ ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕ್ಕೊಂಡು ಭಾಷಣಕಾರರು ತಮ್ಮ ವಿಷಯ ಮಂಡಿಸಲಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿಯ ಭಾಷಣಕಾರರಾದ ಪಂಕಜ್ ಮೋದಿ, ರಾಹುಲ್ ಜಾಧವ್, ಶಶಿಧರ್ ಡೋಂಗ್ರೆ, ರಮಾ ವೈದ್ಯನಾಥನ್, ರಿಧಾ ಗ್ಯಾಟ್ಪೋ, ಸತ್ಯ ಥರಿಯನ್, ಹ್ಯಾರಿಸ್ ಅಬೂಬಕ್ಕರ್ ಮತ್ತು ಜಾಸ್ಮಿರ್ ಥಾಕೂರ್ ಮುಂತಾದವರು ವಿಷಯ ಮಂಡಿಸಲಿದ್ದಾರೆ. ಹೆಸರು ನೋಂದಾವಣೆಗಾಗಿ ೮೭೨೨೯೬೯೪೨೬ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ರಿಜಿಸ್ಟ್ರಾರ್ ಡಾ.ಆಲ್ವಿನ್ ಡೇಸಾ, ಕಾರ್ಯಕ್ರಮ ಸಂಯೋಜಕರಾದ ಫ್ಲೋನಾ ಸೋನ್ಸ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಚಂದ್ರಕಲಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News