ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ: ಬದಲಿ ಸಂಚಾರ ವ್ಯವಸ್ಥೆ

Update: 2022-05-20 16:51 GMT
ಫೈಲ್‌ ಫೋಟೊ

ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯ ಜಪ್ಪುಮಾರ್ಕೆಟ್‌ನಿಂದ ಮೋರ್ಗನ್ಸ್ ಗೇಟ್ ಜಂಕ್ಷನ್ ಕಡೆಗೆ ಹೋಗುವ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯಲಿರುವುದರಿಂದ ಜೂ.5ರವರೆಗೆ ಬದಲಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಮಗಾರಿ ನಡೆಯುವ ವೇಳೆ ಜಪ್ಪು ಮಾರ್ಕೆಟ್‌ನಿಂದ ಮೋರ್ಗನ್ಸ್ ಗೇಟ್ ಜಂಕ್ಷನ್‌ವರೆಗೆ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿದೆ.

ಮೋರ್ಗನ್ಸ್ ಗೇಟ್ ಜಂಕ್ಷನ್ ಕಡೆಯಿಂದ ಜಪ್ಪುಮಾರ್ಕೆಟ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಮಾರ್ಗನ್ಸ್ ಗೇಟ್ ಜಂಕ್ಷನ್‌ನಿಂದ ನೇರವಾಗಿ ಮಾರ್ನಮಿ ಕಟ್ಟೆ ಜಂಕ್ಷನ್‌ ಕಡೆಗೆ ಚಲಿಸಿ ಅಲ್ಲಿಂದ ಎಡಕ್ಕೆ ತಿರುಗಿ ಕಾಶಿಯಾ ಜಂಕ್ಷನ್ ತಲುಪಿ ಅಲ್ಲಿಂದ ನೇರ ಜಪ್ಪು ಮಾರ್ಕೆಟ್ ಕಡೆಗೆ ಸಂಚರಿಸಬೇಕು.

ಜಪ್ಪು ಮಾರ್ಕೆಟ್ ಕಡೆಯಿಂದ ಮೋರ್ಗನ್ಸ್ ಗೇಟ್ ಜಂಕ್ಷನ್ ಕಡೆಗೆ ಎಲ್ಲಾ ವಾಹನಗಳು ಜಪ್ಪು ಮಾರ್ಕೆಟ್ ಜಂಕ್ಷನ್ ಕಡೆಯಿಂದ ನೇರವಾಗಿ ಕಾಶಿಯಾ ಜಂಕ್ಷನ್ ಕಡೆಗೆ ಸಂಚರಿಸಿ ಅಲ್ಲಿಂದ ಮುಂದಕ್ಕೆ ಮಾರ್ನಮಿಕಟ್ಟೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಮಾರ್ಗನ್ಸ್ ಗೇಟ್ ಜಂಕ್ಷನ್ ಕಡೆಗೆ ಸಂಚರಿಸಬೇಕು.

ವಾಸ್ ಲೇನ್: ಈ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲಿರುವುದರಿಂದ ಜೂ.27ರವರೆಗೆ ಬದಲಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಮಗಾರಿ ನಡೆಯುವ ವೇಳೆ ವಾಸ್ ಲೇನ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿದೆ.

ಫಳ್ನೀರ್ ರಸ್ತೆಯಿಂದ ವಾಸ್ ಲೇನ್ ರಸ್ತೆಯ ಮೂಲಕ ಬಲ್ಮಠ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಸಿಟಿ ಆಸ್ಪತ್ರೆ ಜಂಕ್ಷನ್‌ನಲ್ಲಿ ನೇರವಾಗಿ ಚಲಿಸಿ ಅಥೆನಾ ಆಸ್ಪತ್ರೆಯ ಬಳಿ ಬಲಕ್ಕೆ ತಿರುಗಿ ವೈಎಂಸಿಎ ಬಲ್ಮಠ ಮೈದಾನ ರಸ್ತೆ ಮೂಲಕ ಬಲ್ಮಠ ಜಂಕ್ಷನ್ ಕಡೆಗೆ ಸಂಚರಿಸಬೇಕು.

ಬೆಂದೂರ್‌ ವೆಲ್ ರಸ್ತೆಯಿಂದ ವಾಸ್‌ಲೇನ್ ರಸ್ತೆ ಮೂಲಕ ಫಳ್ನೀರ್ ರಸ್ತೆ ಕಡೆಗೆ ಹೋಗುವ ಎಲ್ಲಾ ವಾಹನಗಳು ಬಲ್ಮಠ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ವೈಎಂಸಿಎ ಬಲ್ಮಠ ಮೈದಾನ ರಸ್ತೆಯ ಮೂಲಕ ಫಳ್ನೀರ್ ರಸ್ತೆಯನ್ನು ತಲುಪುವಂತೆ ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News