ಗೋಡಂಬಿಯಾಕಾರದ ಮೊಟ್ಟೆ ಇಡುತ್ತಿರುವ ಕೋಳಿ !

Update: 2022-05-21 10:41 GMT

ಬೆಳ್ತಂಗಡಿ: ಪ್ರಕೃತಿಯಲ್ಲಿ ವಿವಿಧ ರೀತಿಯ ವಿಸ್ಮಯಗಳು ನಡೆಯುತ್ತಿರುತ್ತವೆ, ಇದಕ್ಕೆ ಪೂರಕವಾಗಿ ಗೋಡಂಬಿಯಾಕಾರದ ರೀತಿಯಲ್ಲಿ ಕೋಳಿ ಮೊಟ್ಟೆಗಳು ಬೆಳ್ತಂಗಡಿ ತಾಲೂಕಿನ ಲಾಯಿಲ ಸಮೀಪ ಕಂಡು ಬಂದಿವೆ.

ಲಾಯಿಲ ಗ್ರಾಮದ ಬೇಲಾಜೆ  ಮನೆಯ ಪ್ರಶಾಂತ್ ಎಂಬವರ ಮನೆಯಲ್ಲಿ ಸಾಕಿದ್ದ ಕೋಳಿಯೊಂದು ಕಳೆದ ಕೆಲವು ದಿನಗಳಿಂದ ಮೊಟ್ಟೆ ಇಡುತಿದ್ದು, ಇದನ್ನು ಗಮನಿಸಿದಾಗ ಗೋಡಂಬಿ ರೀತಿಯಲ್ಲಿ ಕಂಡು ಬರುತ್ತಿದೆ. ಮೊಟ್ಟೆಯ ಆಕಾರ  ನೋಡಿ  ಅಶ್ಚರ್ಯಪಡುವಂತಾಗಿದೆ.‌

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News