ಮಂಗಳೂರು | ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ಸ್ಥಳಾಂತರ
Update: 2025-12-15 21:10 IST
ಮಂಗಳೂರು,ಡಿ.15: ದಕ್ಷಿಣ ಕನ್ನಡ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ಡಿಸೆಂಬರ್ 15ರಂದು ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಕೇಂದ್ರವಾದ ಪಡೀಲ್ ಪ್ರಜಾಸೌಧ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಳಾಸ: ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪ್ರಜಾಸೌಧ, 2ನೇ ಮಹಡಿ, ಪಡೀಲ್ ಮಂಗಳೂರು-575007 (ದೂ.ಸಂ:-0824-2459494) ಇಮೇಲ್- dsodes.dakshinakannada@gmail.com ಎಂದು ಪ್ರಕಟನೆ ತಿಳಿಸಿದೆ.