ರುಡ್‌ಸೆಟ್‌ನಲ್ಲಿ ಆರ್ಥಿಕ ಸಾಕ್ಷರತಾ ತರಬೇತಿ ಸಂಪನ್ನ

Update: 2022-05-21 17:46 GMT

ಮಂಗಳೂರು, ಮೇ ೨೧:ಕೇಂದ್ರ ಸರಕಾರದ ಗ್ರಾಮೀಣ ಇಲಾಖೆಯ ದೀನ್ ದಯಾಲ್ ಅಂತ್ಯೋದಯ ಯೋಜನಾ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯದ ಮಿಷನ್ (ಡೇ-ಎನ್‌ಆರ್‌ಎಲ್‌ಎಂ) ವತಿಯಿಂದ ಜಿಲ್ಲಾಮಟ್ಟದ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ ೬ ದಿನಗಳ ಆರ್ಥಿಕ ಸಾಕ್ಷರತಾ ತರಬೇತಿಯನ್ನು ಜಿಪಂನ ಎನ್‌ಆರ್‌ಎಲ್‌ಎಂ ವತಿಯಿಂದ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.

ಜಿಲ್ಲೆಯ ೨೨ ಮಹಿಳಾ ಅಭ್ಯರ್ಥಿಗಳಿಗೆ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಂ.ಸುರೇಶ್, ಎನ್‌ಆರ್‌ಎಲ್‌ಎಂ ಉಪನಿರ್ದೇಶಕಿ ಎಂ. ಶಕುಂತಳಾ, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಉಷಾ ವಿ.ನಾಯಕ್, ತರಬೇತಿ ನೀಡಿದರು.

*ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಕೆನರಾ ಬ್ಯಾಂಕ್ ಉಜಿರೆ ಶಾಖೆಯ ಹಿರಿಯ ಪ್ರಬಂಧಕಿ ರಾಜಶ್ರೀ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಎಂ.ಸುರೇಶ್, ಎನ್‌ಆರ್‌ಎಲ್‌ಎಂನ ಡಿಎಂ ಶಕುಂತಳಾ  ಬೆಳ್ತಂಗಡಿ ಎನ್‌ಆರ್‌ಎಲ್‌ಎಂ ವ್ಯವಸ್ಥಾಪಕಿ ಪ್ರತಿಮಾ, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಉಷಾ ವಿ. ನಾಯಕ್ ಹಾಗೂ ಮಂಗಳೂರು ಎನ್‌ಆರ್‌ಎಲ್‌ಎಂನ ವ್ಯವಸ್ಥಾಪಕ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕಿ ಅನಸೂಯ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News