×
Ad

ಬೆಂಗಳೂರು ನಗರದಲ್ಲಿ ಮಳೆ ಅವಾಂತರ: ನೆಲಮಹಡಿಯಲ್ಲಿದ್ದವರಿಗೆ ಮಾತ್ರ ಪರಿಹಾರ

Update: 2022-05-23 17:50 IST

ಬೆಂಗಳೂರು, ಮೇ 23: ಬೆಂಗಳೂರಿನಲ್ಲಿ ಮಳೆಯಿಂದ ಹಾನಿ ಹಿನ್ನೆಲೆ ನೆಲಮಹಡಿ ಸಂತ್ರಸ್ತರಿಗೆ ಮಾತ್ರ ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ತಿಳಿಸಿದರು.

ಸೋಮವಾರ ನಗರದ ಬಿಬಿಎಂಪಿ ಕೇಂದ್ರಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮದ ಪ್ರಕಾರ ನೆಲಮಹಡಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಮೊದಲನೆ ಮಹಡಿಯಲ್ಲಿರುವವರಿಗೆ ಹೆಚ್ಚು ಅನಾಹುತವಾಗಿಲ್ಲ. ಆದರೆ, ನೆಲಮಹಡಿಯಲ್ಲಿ ಇದ್ದ ಮನೆಗಳಲ್ಲಿನ ವಸ್ತುಗಳು ಹಾನಿಗೊಳಗಾಗಿವೆ. ಹೀಗಾಗಿ ನೆಲ ಮಹಡಿಯಲ್ಲಿರುವವರಿಗೆ ಮಾತ್ರ ಪರಿಹಾರ ನೀಡಲಾಗುವುದು ಎಂದರು.

ಮಳೆಯಿಂದ ಇದೂವರೆಗೂ 3453 ಅರ್ಜಿಗಳು ಬಂದಿವೆ. ಇದರಲ್ಲಿ ಶೇ.ರಷ್ಟು ಮನೆಗಳಿಗೆ ಪರಿಹಾರ ನೀಡಲಾಗಿದೆ. ಬಾಕಿ ಉಳಿದ ಶೇಕಡಾ 60ರಷ್ಟು ಮನೆಗಳಿಗೆ ಪರಿಹಾರ ಸಂಜೆಯೊಳಗೆ ನೀಡಲಾಗುವುದು ಎಂದರು.

ಬ್ರಿಗೇಡ್‍ರಸ್ತೆಯಲ್ಲಿ ಯುವತಿ ಬಿದ್ದು ಸಾವನ್ನಪ್ಪಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ನಗರದಲ್ಲಿರುವ ಬಹು ಮಹಡಿ ಕಟ್ಟಡ, ವಾಣಿಜ್ಯ ಸಂಕೀರ್ಣಗಳ ಸುರಕ್ಷತೆ ಕುರಿತಂತೆ ಬಿಬಿಎಂಪಿ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News