ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣ: ಇಮೇಲ್ ಪತ್ತೆ

Update: 2022-05-23 17:22 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 23: ಬೆಂಗಳೂರಿನ ಕೆಲ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆವೊಡ್ಡಿದ್ದ ಬಗ್ಗೆ ತನಿಖೆ ನಡೆಸಿರುವ ಪೊಲೀಸ್ ಅಧಿಕಾರಿಗಳು, ಇಮೇಲ್ ಮಾಡಿದ್ದ ಅಪ್ರಾಪ್ತನನ್ನು ಗುರುತಿಸಿದ್ದಾರೆ ಎಂದು ವರದಿಯಾಗಿದೆ.

ತಮಿಳುನಾಡು ಮೂಲದ 17 ವರ್ಷದ ಬಾಲಕನೇ ಇ-ಮೇಲ್‍ಗಳ ಮೂಲಕ ಹುಸಿ ಬಾಂಬ್ ಕರೆ ಮಾಡಿರುವುದು ಗೊತ್ತಾಗಿದೆ.

ಕಳೆದ ಎಪ್ರಿಲ್‍ನಲ್ಲಿ ಬೆಂಗಳೂರಿನ 10ಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿಬಾಂಬ್ ಕರೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯ ಪತ್ತೆ ಮಾಡಿದ್ದಾರೆ. ಈತ ಭೂಪಾಲ್‍ನ ಕೆಲ ಶಾಲೆಗಳಿಗೂ ದುಷ್ಕರ್ಮಿಗಳು ಇಮೇಲ್ ಮಾಡಿ ಬಾಂಬ್ ಇಟ್ಟಿರುವುದಾಗಿ ಹುಸಿ ಸಂದೇಶ ಕಳುಹಿಸಿದ್ದನು ಎಂದು ಹೇಳಲಾಗುತ್ತಿದೆ.

ತಮಿಳುನಾಡಿನ ಮೂಲದವನಾಗಿರುವ 17 ವರ್ಷದ ಬಾಲಕ ಸಾಫ್ಟ್‍ವೇರ್ ಕಂಪನಿ ಮಾಡುವ ಆಶಯ ಹೊಂದಿದ್ದ. ಜತೆಗೆ, ಮಲ್ಟಿಪಲ್ ಮೇಲ್ ಕಳಿಸುವ ಬೋಟ್ ಸಾಫ್ಟ್‍ವೇರ್ ಪ್ರೋಗ್ರಾಮ್ ಸಿದ್ಧಪಡಿಸಿ ಬಳಿಕ ವಿದೇಶಿಯರಿಗೆ ಕಂಪ್ಯೂಟರ್  ಪ್ರೋಗ್ರಾಮ್ ಮಾರಾಟ ಮಾಡಿದ್ದ. ದುಷ್ಕರ್ಮಿಗಳು ಇದೇ ಸಾಫ್ಟ್‍ವೇರ್‍ನಿಂದ ಬೆಂಗಳೂರು ಹಾಗೂ ಭೂಪಾಲ್ ಶಾಲೆಗಳಿಗೆ ಬೆದರಿಕೆ ಇಮೇಲ್ ಕಳಿಸಿದ್ದರು ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News