ಬೆಂಗಳೂರು: ರಸ್ತೆ, ಕಾಂಪೌಂಡ್ ಗಳ ಮೇಲೆ 'SORRY' ಎಂದು ಬರೆದ ಕಿಡಿಗೇಡಿಗಳ ವಿರುದ್ಧ ದೂರು ದಾಖಲು
Update: 2022-05-24 19:24 IST
ಬೆಂಗಳೂರು, ಮೇ 24: ರಸ್ತೆ, ಶಾಲೆಯ ತಡೆಗೋಡೆ ಮೇಲೆ ಸ್ಥಳೀಯರ ಕಣ್ಣುಕುಕ್ಕುವಂತೆ `ಸಾರಿ’(SORRY) ಎಂದು ಸಾಲು ಸಾಲಾಗಿ ಬರೆದಿರುವ ಕುರಿತು ಇಲ್ಲಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೋಮವಾರ ತಡರಾತ್ರಿ ಸುಂಕದಕಟ್ಟೆಯ ಶಾಂತಿಧಾಮ ವಿದ್ಯಾಸಂಸ್ಥೆ ಶಾಲೆಯ ತಡೆಗೋಡೆ, ರಸ್ತೆ ಸೇರಿ ಬಹುತೇಕ ಕಡೆಗಳಲ್ಲಿ ಕ್ಷಮಿಸು ಎಂದು ಆಂಗ್ಲ ಭಾಷೆಯಲ್ಲಿ ಬರೆಯಲಾಗಿದೆ.
ಸದ್ಯ ಈ ಪದ ಬರೆದಿರುವವರ ಪತ್ತೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.