×
Ad

ಮೇ 24ರಿಂದ ಸುಲ್ತಾನ್ ವಜ್ರಾಭರಣ ಮಳಿಗೆಯಲ್ಲಿ ಆಭರಣ ಪ್ರದರ್ಶನ

Update: 2022-05-24 22:04 IST

ಮಂಗಳೂರು: ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ಸುಲ್ತಾನ್ ಸಮೂಹ ಸಂಸ್ಥೆಗಳ ಸುಲ್ತಾನ್ ವಜ್ರ ಮತ್ತು ಚಿನ್ನಾಭರಣ ಮಳಿಗೆಯಲ್ಲಿ ಮೇ 24ರಿಂದ ಜೂನ್ 30ರವರೆಗೆ ನಡೆಯಲಿರುವ ವಧುವಿನ  ಶೃಂಗಾರ ದ ಅಪೂರ್ವ ವಜ್ರ ಮತ್ತು ಚಿನ್ನಾಭರಣಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ಪ್ರದರ್ಶನದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದ  ಉದ್ಯಮಿ ಜಿತೇಂದ್ರ ಕೊಟ್ಟಾರಿ ಮಾತನಾಡುತ್ತಾ, ಮಂಗಳೂರು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದೆ. ಸಾಕಷ್ಟು ಉದ್ಯಮಗಳು ಸ್ಥಾಪನೆ ಯಾಗಿವೆ. ಸುಲ್ತಾನ್ ಗೋಲ್ಡ್ ನಂತಹ ಸಂಸ್ಥೆ ಗಳು ಬೆಳವಣಿಗೆ ಹೊಂದುವುದರ ಜೊತೆ ನಗರದ ಅಭಿವೃದ್ಧಿಗೂ ಕೊಡುಗೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.

ಮಾಜಿ ಮೇಯರ್ ಅಶ್ರಫ್ ಮಾತನಾಡುತ್ತಾ, ಮಂಗಳೂರು ನಗರದಲ್ಲಿ ಸಾಕಷ್ಟು ಚಿನ್ನಾಭರಣ ಮಳಿಗೆಗಳು ಆರಂಭಗೊಂಡು ಗ್ರಾಹಕರಿಗೆ ಅನುಕೂಲ ಮಾಡಿ ಕೊಡುವುದರ ಜೊತೆಗೆ ಜನತೆಗೂ ಸಹಾಯ ನೀಡುತ್ತಾ ಬಂದಿದೆ. ಜನರೊಂದಿಗೆ ಉತ್ತಮ ಬಾಂಧವ್ಯ ದೊಂದಿಗೆ ನಗುಮೊಗದ ಸೇವೆ ನೀಡುತ್ತಾ ಸಂಸ್ಥೆ ನಡೆಸುತ್ತಿರುವ ಸುಲ್ತಾನ್ ಸಂಸ್ಥೆಯ ಮಾಲಕರಿಗೆ ಶುಭ ಹಾರೈಸುವುದಾಗಿ ತಿಳಿಸಿದ್ದಾರೆ.

ಬಿ.ಎ. ಅಬ್ದುಲ್ ನಾಝೀರ್ ಲಕ್ಕಿಸ್ಟಾರ್ ಮಾತನಾಡುತ್ತಾ, ಸುಲ್ತಾನ್ ವಜ್ರಾಭರಣ ಸಂಸ್ಥೆ ತಮ್ಮ ಉದ್ಯಮದ ಜೊತೆ ಸಮಾಜದ ಸಾಕಷ್ಟು ಬಡವರಿಗೆ ನೆರವು ನೀಡುತ್ತಿದೆ. ಸಾಕಷ್ಟು ಜನರಿಗೆ ಉದ್ಯೋಗ ನೀಡಿ ಅವರ ಕುಟುಂಬಕ್ಕೆ ನೆರವಾಗುತ್ತಿದೆ ಎಂದು ಹೇಳಿ, ಶುಭ ಹಾರೈಸಿದರು.

ಕರ್ನಾಟಕ ಮುಸ್ಲಿಂ ಜಮಾತ್ ಉಪಾಧ್ಯಕ್ಷ ನಾಝೀರ್ ಶೇಖ್ ಬೈಲೂರು, ರಹ್ಮಾನಿಯಾ ಜುಮಾ ಮಸೀದಿ ನಾರ್ಶದ ಅಧ್ಯಕ್ಷ ಹಾಜಿ ಎನ್.ಸುಲೈಮಾನ್, ಮಾಲಿಕುದ್ದೀನ್ ಜುಮಾ ಮಸೀದಿ ಉಪ್ಪಿನಂಗಡಿಯ ಅಧ್ಯಕ್ಷ ಹಾಜಿ ಮುಸ್ತಾಫ ಕೆಂಪಿ, ಉದ್ಯಮಿಗಳಾದ ಅಹ್ಮದ್ ಬಾವ, ಅಬ್ದುಲ್ ರಶೀದ್, ಸಿದ್ದೀಕ್ ಹಾಜಿ ಕೂಳೂರು, ಕೆ.ಎಂ.ಹಕೀಮ್, ಜೆಡಿಎಸ್ ದಕ್ಷಿಣ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಇಝ್ಜಾ ಬಜಾಲ್, ಸೂಫಿ ಕುಂಞಿ ಹಾಜಿ, ಮೊಹಿಯುದ್ದೀನ್ ಜುಮಾ ಮಸೀದಿ ಮೂಲರ ಪಟ್ನದ ಅಧ್ಯಕ್ಷ ಅಶ್ರಫ್ ಎಂ.ಬಿ  ಮೊದಲಾದವರು ಉಪಸ್ಥಿತರಿದ್ದು ಉದ್ಘಾಟನಾ ಕಾರ್ಯಕ್ರಮ ದಲ್ಲಿ ಪಾ ಲ್ಗೊಂಡು ಶುಭ ಹಾರೈಸಿದರು.

ಸಮಾರಂಭದಲ್ಲಿ ಸುಲ್ತಾನ್ ಸಮೂಹ ಸಂಸ್ಥೆ ಗಳ ಕಾರ್ಯ ನಿರ್ವಾಹಕ ನಿರ್ದೇಶಕ ಟಿ.ಎಂ.ಅಬ್ದುಲ್ ರಹಿಮಾನ್ ಮಾತನಾಡುತ್ತಾ, ಮದುವೆ ಸಂಭ್ರಮದ ಆಭರಣ ಖರೀದಿಗೆ  ದಿಲನ್ ಆಭರಣಗಳ ಪ್ರದರ್ಶನ ಒಂದು ಅಫೂರ್ವ ಅವಕಾಶ. ಈ ಅವಕಾಶವನ್ನು ಸುಲ್ತಾನ್ ಆಭರಣ ಮಳಿಗೆ ಒದಗಿಸಿದೆ. ಸದುಪಯೋಗ ಪಡಿಸಿಕೊಳ್ಳುವಂತೆ ವಿನಂತಿ ಮಾಡುವುದಾಗಿ ತಿಳಿಸಿದ್ದಾರೆ. ಸುಲ್ತಾನ್ ಆಭರಣ ಮಳಿಗೆಯ ಮಂಗಳೂರು ಬ್ರಾಂಚ್ ಮ್ಯಾನೇಜರ್  ಅಬ್ದುಲ್ ಸತ್ತಾರ್, ಸೀನಿಯರ್ ಮ್ಯಾನೇಜರ್ ಮುಸ್ತಾಫ ಕಕ್ಕಿಂಜೆ ಉಪಸ್ಥಿತರಿದ್ದರು.

ಸಾಹಿಲ್ ಝಾಹಿರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News