×
Ad

"ಶಿಕ್ಷಣ ಕ್ಷೇತ್ರವನ್ನು ಕಾಂಗ್ರೆಸ್ ಓಟ್ ಬ್ಯಾಂಕ್ ಮಾಡಿಕೊಂಡಿದ್ದರೆ ಬಿಜೆಪಿಗೆ ಅಸ್ತಿತ್ವವೇ ಇರುತ್ತಿರಲಿಲ್ಲ"

Update: 2022-05-25 11:54 IST

ಬೆಂಗಳೂರು, ಮೇ 25: ಕಾಂಗ್ರೆಸ್ ಶಿಕ್ಷಣ ಕ್ಷೇತ್ರವನ್ನು ವೋಟ್ ಬ್ಯಾಂಕ್ ಮಾಡಿದೆ ಎಂದಿರುವ ಸಚಿವ ನಾಗೇಶ್‌ರವರ ಹೇಳಿಕೆ ಅವಿವೇಕತನದ ಪರಾಕಾಷ್ಠೆ. ಒಂದು ವೇಳೆ ಶಿಕ್ಷಣ ಕ್ಷೇತ್ರವನ್ನು ಕಾಂಗ್ರೆಸ್ ಓಟ್ ಬ್ಯಾಂಕ್ ಮಾಡಿಕೊಂಡಿದ್ದರೆ ಬಿಜೆಪಿಗೆ ಇಂದು ಅಸ್ತಿತ್ವವೇ ಇರುತ್ತಿರಲಿಲ್ಲ.‌ ಶಿಕ್ಷಣದಲ್ಲಿ ರಾಜಕೀಯ ಬೆರೆಸುವುದು ಬಿಜೆಪಿಯ ಹೀನಬುದ್ಧಿಯೇ ಹೊರತು ಕಾಂಗ್ರೆಸ್‌ನದ್ದಲ್ಲ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

ಶಿಕ್ಷಣ ಸಚಿವರ ಹೇಳಿಕೆಗೆ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿರುವ ಅವರು, 'ಏರುತಿಹುದು, ಹಾರುತಿಹುದು ನೋಡು ನಮ್ಮ ಬಾವುಟ' ಪಠ್ಯವನ್ನು ಕಾಂಗ್ರೆಸ್ ಪಕ್ಷ ತೆಗೆದುಹಾಕಿದೆ ಎಂದು ಅಪಾದಿಸಿರುವ ಸಚಿವ ನಾಗೇಶ್ ಏನನ್ನು ಸಮರ್ಥಿಸಿಕೊಳ್ಳಲು ಹೊರಟಿದ್ದಾರೆ. ಹೆಡಗೆವಾರ್ ಧ್ವಜವೆಂದರೆ ಕೇವಲ ಭಗವಾಧ್ವಜ ಎಂದಿದ್ದರು. ತ್ರಿವರ್ಣ ಧ್ವಜವನ್ನು ಹೆಡಗೆವಾರ್ ಎಂದೂ ಒಪ್ಪಿರಲಿಲ್ಲ. ಹೆಡಗೆವಾರ್ ಪ್ರತಿಪಾದಿಸಿದ ದೇಶಪ್ರೇಮ ಯಾವುದು.? ಎಂದು ಪ್ರಶ್ನಿಸಿದ್ದಾರೆ.

ನೆಹರೂ ತಮ್ಮ‌ ಮಗಳಿಗೆ ಬರೆದ ಪತ್ರ ಪಾಠವಾಗಿದ್ದ ಬಗ್ಗೆ ಆಕ್ಷೇಪಣೆ ಎತ್ತಿರುವ ನಾಗೇಶ್‌ರವರಿಗೆ ಅದರಲ್ಲಿ ಹುಳುಕು‌ ಕಂಡಿದ್ದೇನು? ನೆಹರೂ‌ ಬರೆದ ಪತ್ರದ ಬದಲು‌ ಸಾವರ್ಕರ್ ಬ್ರಿಟಿಶರಿಗೆ ಬರೆದ ಕ್ಷಮಾಪಣಾ ಪತ್ರ ಪಾಠವಾಗಿಸೋ ಇಚ್ಛೆ ಸಚಿವರಿಗಿದೆಯೆ? ಹೋಗಲಿ, ಸಾವರ್ಕರ್ ಬರೆದ ಕ್ಷಮಾಪಣಾ ಪತ್ರವನ್ನು‌‌ ಪಠ್ಯಕ್ಕೆ ಸೇರಿಸೋ ತಾಕತ್ತು ಬಿಜೆಪಿಗಿದೆಯೆ? ಎಂದು ಸವಾಲು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News