ಮಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡ
ಮಂಗಳೂರು : ನಗರದ ಪಿವಿಎಎಸ್ ವೃತ್ತದ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಬುಧವಾರ ನಡೆದಿದೆ. ಇದರಿಂದ ಕಾರಿನ ಮುಂಭಾಗ ಭಾಗಶಃ ಸುಟ್ಟು ಹೋಗಿದೆ.
ಪಿವಿಎಸ್ ವೃತ್ತದ ಕಡೆಯಿಂದ ನವಭಾರತ ವೃತ್ತ ಕಡೆಗೆ ಚಲಿಸುತ್ತಿದ್ದ ಕಾರಿನ ಮುಂಭಾಗದಲ್ಲಿ ಹೊಗೆ ಕಂಡ ತಕ್ಷಣ ಚಾಲಕ ಕಾರು ನಿಲ್ಲಿಸಿದರು. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.
ಕಾರಿನ ಮುಂಭಾಗ ಭಾಗಶಃ ಸುಟ್ಟು ಹೋಗಿದೆ. ಬ್ಯಾಟರಿ ಬಳಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಅವಘಡ ಸಂಭವಿಸಿರಬೇಕು ಎಂದು ಶಂಕಿಸಲಾಗಿದೆ. ಘಟನೆಯ ವೇಳೆ ಕಾರಿನಲ್ಲಿ ಚಾಲಕ ಸಹಿತ ಇಬ್ಬರಿದ್ದರು ಎಂದು ತಿಳಿದುಬಂದಿದೆ.
ಮಾ.29ರಂದು ರಾತ್ರಿ ವೇಳೆ ಕಾರಿನಲ್ಲಿ ಬೆಂಕಿ ಉಂಟಾಗಿ ಕಾರು ಸಂಪೂರ್ಣ ಸುಟ್ಟ ಘಟನೆ ಶಕ್ತಿನಗರದ ಪಾರ್ಕ್ ಬಳಿ ಸಂಭವಿಸಿತ್ತು. ಮಹಿಳೆಯೋರ್ವರು ಕಾರಿನಲ್ಲಿ ಮೊಬೈಲ್ ಚಾರ್ಜ್‌ಗೆ ಇಟ್ಟು ಪಾರ್ಕ್‌ಗೆ ಹೋಗಿ ವಾಪಸ್ ಬರುವಾಗ ಮೊಬೈಲ್ ಚಾರ್ಜ್ ಇಟ್ಟ ಸ್ಥಳದಲ್ಲಿ ಬೆಂಕಿ ಕಾಣಸಿಕೊಂಡಿತ್ತು.