ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ನಾಳೆ (ಮೇ 26) ಮಂಗಳೂರಿಗೆ
Update: 2022-05-25 18:43 IST
ಮಂಗಳೂರು, ಮೇ 25: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಎಸ್.ಕ್ಯೂ.ಆರ್.ಇಲ್ಯಾಸ್ ಮೇ 26ರಂದು ಮಂಗಳೂರಿಗೆ ಆಗಮಸಲಿದ್ದು ಬೆಳಗ್ಗೆ ವೆಲೆನ್ಷಿಯಾದ ಬಳಿ ಇರುವ ಮರಿಯ ಜಯಂತಿ ಮಂದಿರ ಮಿನಿ ಭವನದಲ್ಲಿ ಸಭೆ ನಡೆಸಲಿದ್ದಾರೆ.
ಕರ್ನಾಟಕ ರಾಜ್ಯ ಪ್ರವಾಸದಲ್ಲಿರುವ ಅಧ್ಯಕ್ಷರು ದೇಶದ "ಇಂದಿನ ರಾಜಕೀಯ ಪರಿಸ್ಥಿತಿ ಹಾಗೂ ಪ್ರಜೆಗಳ ಹೊಣೆಗಾರಿಕೆ" ಎಂಬ ವಿಷಯದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಸುಬ್ರಹ್ಮಣಿ ಅರುಮುಗಂ, ಕರ್ನಾಟಕ ರಾಜ್ಯ ಅಧ್ಯಕ್ಷರಾದ ಅಡ್ವೋಕೇಟ್ ತಾಹೀರ್ ಹುಸೇನ್, ರಾಜ್ಯ ಉಪಾಧ್ಯಕ್ಷರಾದ ಶ್ರೀಕಾಂತ ಸಾಲಿಯಾನ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಹಬೀಬುಲ್ಲಾ ಖಾನ್ ಸದ್ರಿ ಸಮಾವೇಶದಲ್ಲಿ ಭಾಗವಹಿಸಲಿರುವುದಾಗಿ ವೆಲ್ಫೇರ್ ಪಕ್ಷದ ದ.ಕ. ಜಿಲ್ಲಾ ಸಮಿತಿ ವಕ್ತಾರ ಎಸ್. ಎಂ. ಮುತ್ತಲಿಬ್ ರವರು ತಮ್ಮ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.